ಮಂಗಳವಾರ, ಜೂಲೈ 7, 2020
28 °C

ಭಕ್ತಿಯಿಂದ ಬದುಕು ಸಾರ್ಥಕ: ಪೇಜಾವರಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಕ್ತಿಯಿಂದ ಬದುಕು ಸಾರ್ಥಕ: ಪೇಜಾವರಶ್ರೀ

ಬಂಟ್ವಾಳ: ಭಗವಂತನು ಕಣ್ಣಿನ ರೆಪ್ಪೆಯಂತೆ ಭಕ್ತರನ್ನು ಸದಾ ರಕ್ಷಿಸುತ್ತಿದ್ದು, ನಿಷ್ಕಲ್ಮಶ ಭಕ್ತಿಯಿಂದ ಆರಾಧನೆ ಮಾಡಿದಾಗ ಸಿಹಿ ಅನುಭವದ ಜತೆಗೆ ಬದುಕು ಸಾರ್ಥಕತೆ ಪಡೆಯುತ್ತದೆ. ಇದಕ್ಕಾಗಿ ನಂಬಿಕೆ ಮತ್ತು ವಿಶ್ವಾಸದ ತಳಹದಿಯಲ್ಲಿ ನಿಸ್ವಾರ್ಥ ಸೇವಾ ಮನೋಭಾವ ಪ್ರತಿಯೊಬ್ಬರಲ್ಲಿಯೂ ಅತ್ಯಗತ್ಯವಾಗಿ ಇರಬೇಕು ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಬಿ.ಸಿ.ರೋಡ್ ರಕ್ತೇಶ್ವರಿ ದೇವಳದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.ಶಾಸಕ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮರಸ್ಯ ಮತ್ತು ಸೌಹಾರ್ದತೆಗೆ ಧಾರ್ಮಿಕ ಕೇಂದ್ರಗಳು ಪೂರಕವಾಗಲಿ ಎಂದರು.ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ದೇಶೀಯ ಸಂಸ್ಕೃತಿ ಮತ್ತು ಆಚಾರ-ವಿಚಾರ ಉಳಿವಿಗೆ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರಗಳಿಂದ ಸಾಧ್ಯವಾಗುತ್ತದೆ ಎಂದರು.ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿ ಉಪನ್ಯಾಸ ನೀಡಿದರು. ಮೊಡಂಕಾಪು ಡಾ.ಲಕ್ಷ್ಮೀನಾರಾಯಣ ಹೊಳ್ಳ, ಮಿತ್ತಬೈಲು ಉಗ್ಗಪ್ಪ ಪೂಜಾರಿ, ಗಂಗಾಧರ ಅವರನ್ನು ಸನ್ಮಾನಿಸಲಾಯಿತು.ಪುರಸಭಾಧ್ಯಕ್ಷ ಬಿ.ದಿನೇಶ ಭಂಡಾರಿ, ಬೂಡಾ ಅಧ್ಯಕ್ಷ ಎ.ಗೋವಿಂದ ಪ್ರಭು, ಸದಸ್ಯೆ ಮೀನಾಕ್ಷಿ ಬಂಗೇರ, ದೇವಳದ ಆಡಳಿತ ಸಮಿತಿ ಅಧ್ಯಕ್ಷ ಎಂ.ಲಿಂಗಪ್ಪ ಆಚಾರ್, ಸಮಿತಿ ಗೌರವಾಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್, ಉಪಾಧ್ಯಕ್ಷ ಬಿ.ವಿಶ್ವನಾಥ,  ಬಿ.ರಾಜೇಶ್ ಎಲ್.ನಾಯಕ್,  ಬಿ.ಗೋಪಾಲ ಸುವರ್ಣ, ಪ್ರಮುಖರಾದ ಬಿ.ಮೋಹನ್, ಪುಷ್ಪರಾಜ ಶೆಟ್ಟಿ, ವಕೀಲ ಪ್ರಸಾದ್ ಕುಮಾರ್, ಎನ್.ಶಿವಶಂಕರ್, ಬಿ.ರಾಮಚಂದ್ರ ರಾವ್, ಮಂಜು ವಿಟ್ಲ ಮತ್ತಿತರರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.