ಮಂಗಳವಾರ, ಜುಲೈ 14, 2020
27 °C

ಭಕ್ತ ಪ್ರಹ್ಲಾದನ ಗೊಂಬೆಯಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಕ್ತ ಪ್ರಹ್ಲಾದನ ಗೊಂಬೆಯಾಟ

ಭಾರತೀಯ ವಿದ್ಯಾಭವನ ಮತ್ತು ಇನ್ಫೋಸಿಸ್ ಪ್ರತಿಷ್ಠಾನದ ಸಹಯೋಗದಲ್ಲಿ ಧಾತು ಥಿಯೇಟರ್ ಗುರುವಾರ `ಭಕ್ತ ಪ್ರಹ್ಲಾದ~ ಸೂತ್ರದ ಗೊಂಬೆಯಾಟ (ರಚನೆ:ಅನುಪಮಾ ಮತ್ತು ವಿದ್ಯಾಶಂಕರ್ ಹೊಸಕೆರೆ, ನಿರ್ದೇಶನ: ಅನುಪಮಾ ಹೊಸಕೆರೆ) ಪ್ರದರ್ಶನ ನೀಡುತ್ತಿದೆ.ಧಾತು ಪಪೆಟ್ ಥಿಯೇಟರ್ ಬೆಂಗಳೂರಿನ ಪ್ರಖ್ಯಾತ ಗೊಂಬೆಯಾಟದ ತಂಡಗಳಲ್ಲಿ ಒಂದು. ಹಂಪಿ ಉತ್ಸವ, ಸುವರ್ಣ ಕರ್ನಾಟಕ ಮಹೋತ್ಸವ, ದೆಹಲಿಯ ಅಂತರ್‌ರಾಷ್ಟ್ರೀಯ ಕಲಾ ಉತ್ಸವ ಸೇರಿದಂತೆ ಹಲವು ಉತ್ಸವಗಳಲ್ಲಿ ಪ್ರದರ್ಶನ ನೀಡಿದೆ.ಇದರ ನಿರ್ದೇಶಕಿ ಅನುಪಮಾ ಹೊಸಕೆರೆ ಗೊಂಬೆಯಾಟದ ಕಲಾ ಪ್ರಕಾರಕ್ಕಾಗಿ ಸಂಸ್ಕೃತಿ ಸಚಿವಾಲಯದಿಂದ ಸಿನಿಯರ್ ಫೆಲೊಶಿಪ್ ಪಡೆದಿದ್ದಾರೆ. ರಾಮಾಯಣ, ಮಹಾಭಾರತ, ಭಾಗವತದ ಕಥೆಗಳನ್ನು ಆಯ್ದುಕೊಂಡು ಕನ್ನಡ, ಇಂಗ್ಲಿಷ್, ಸಂಸ್ಕೃತ ವಿವರಣೆಯೊಂದಿಗೆ ಗೊಂಬೆಯಾಟ ಪ್ರಕಾರದಲ್ಲಿ  ಸುಂದರವಾಗಿ ಅಳವಡಿಸುತ್ತಾರೆ.ಧಾತು, ವಿಜಯನಗರ ವೈಭವ, ಹರಿಶ್ಚಂದ್ರ, ಅಷ್ಟಾವಕ್ರ, ಧರ್ಮವ್ಯಾಧ, ನಳ ದಮಯಂತಿ ಇತ್ಯಾದಿ ಕಥೆಗಳನ್ನು ಗೊಂಬೆಯಾಟದಲ್ಲಿ ಅಳವಡಿಸಿ ಜನಮೆಚ್ಚುಗೆ ಪಡೆದಿದೆ.ಈಗ `ಭಕ್ತ ಪ್ರಹ್ಲಾದ~ನ ಕಥೆಯನ್ನು ಗೊಂಬೆಯಾಟದಲ್ಲಿ ಪ್ರಸ್ತುತಪಡಿಸುತ್ತಿದೆ. ರಾಕ್ಷಸ ರಾಜ ಹಿರಣ್ಯಕಶಿಪುವಿನ ಮಗನಾಗಿ ಹುಟ್ಟಿದ ಪ್ರಹ್ಲಾದ, ವಿಷ್ಣುಭಕ್ತನಾಗಿ ಅಪ್ಪನ ಕೆಂಗಣ್ಣಿಗೆ ಗುರಿಯಾಗುವುದು, ಪ್ರಹ್ಲಾದನ ಮೊರೆಯಂತೆ ನರಸಿಂಹ ಅವತಾರದಲ್ಲಿ ಪ್ರತ್ಯಕ್ಷನಾಗುವ ವಿಷ್ಣು ಹಿರಣ್ಯಕಶಿಪುವನ್ನು ಕೊಲ್ಲುವ ಕಥೆಯನ್ನು ಸೂತ್ರದ ಗೊಂಬೆಗಳ ಮೂಲಕ ಮನೋಜ್ಞವಾಗಿ ಕಟ್ಟಿಕೊಡಲಾಗಿದೆ.ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ ಪಿ ವಾಡಿಯಾ ರಸ್ತೆ, ಬಸವನಗುಡಿ. ಸಂಜೆ 6.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.