ಭಗತ್ ಸಿಂಗ್ ನೆನಪಿನಲ್ಲಿ ನಾಣ್ಯ

7

ಭಗತ್ ಸಿಂಗ್ ನೆನಪಿನಲ್ಲಿ ನಾಣ್ಯ

Published:
Updated:

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮಶತಮಾನೋತ್ಸವದ ನೆನಪಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಅವರ ಭಾವಚಿತ್ರ ಇರುವ ಐದು ರೂಪಾಯಿ ಮುಖಬೆಲೆಯ ನಾಣ್ಯಗಳನ್ನು ಚಲಾವಣೆಗೆ ಬಿಡಲಿದೆ.ಈ ನಾಣ್ಯದ ಒಂದು ಬದಿಯಲ್ಲಿ ಭಗತ್ ಸಿಂಗ್ ಅವರ ಭಾವಚಿತ್ರ ಇರಲಿದೆ. ಭಾವಚಿತ್ರದ ಎಡ ಅಂಚಿನಲ್ಲಿ `ಶಹೀದ್ ಭಗತ್ ಸಿಂಗ್ ಜನ್ಮಶತಾಬ್ದಿ~ ಎಂದು ದೇವನಾಗರಿ ಲಿಪಿಯಲ್ಲಿ, ಬಲಭಾಗದಲ್ಲಿ ಇದೇ ವಾಕ್ಯವನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿರುತ್ತದೆ. ಭಾವಚಿತ್ರದ ಕೆಳಭಾಗದಲ್ಲಿ `1907-2007~ (ಭಗತ್ ಸಿಂಗ್ ಅವರ ಜನನದ ಇಸವಿ ಹಾಗೂ ಅವರು ಜನಿಸಿ ನೂರು ವರ್ಷ ತುಂಬಿದ ಇಸವಿ) ಎಂದು ಬರೆಯಲಾಗಿರುತ್ತದೆ.ನಾಣ್ಯದ ಇನ್ನೊಂದು ಭಾಗದಲ್ಲಿ ಸಾರನಾಥದ ಅಶೋಕ ಸ್ತಂಭದ ಸಿಂಹದ ಲಾಂಛನ, ಅದರ ಕೆಳಗೆ `ಸತ್ಯಮೇವ ಜಯತೆ~ ಎಂದೂ ಬರೆಯಲಾಗಿದೆ ಎಂದು ಆರ್‌ಬಿಐ ಪ್ರಾದೇಶಿಕ ನಿರ್ದೇಶಕಿ ಉಮಾ ಶಂಕರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry