ಬುಧವಾರ, ಜನವರಿ 22, 2020
28 °C

ಭಗವದ್ಗೀತೆ: ಮೇಲ್ಮನವಿಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೊ (ಪಿಟಿಐ): ಭಗವದ್ಗೀತೆಯನ್ನು ರಷ್ಯಾ ಭಾಷೆಗೆ ಭಾಷಾಂತರಿಸುವುದನ್ನು ನಿಷೇಧಿಸುವಂತೆ  ಕೋರಿದ್ದ ಮನವಿಯನ್ನು ಸೈಬೀರಿಯನ್ ಕೋರ್ಟ್ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ವಕೀಲರು ಸಿದ್ಧತೆ ನಡೆಸಿದ್ದಾರೆ.ಆದರೆ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಜ.25ಕ್ಕೆ ಅಂತಿಮ ದಿನವಾಗಿತ್ತು. ಹೀಗಾಗಿ ಅವಧಿ ಮುಕ್ತಾಯವಾಗಿದೆ ಎಂದು ರಷ್ಯಾದ ಹಿಂದು ಕೌನ್ಸಿಲ್ ಅಧ್ಯಕ್ಷ ಮತ್ತು ಮಾಸ್ಕೊ ಇಸ್ಕಾನ್‌ನ ಸಾಧು ಪ್ರಿಯ ದಾಸ್ ತಿಳಿಸಿದ್ದಾರೆ.ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅರ್ಜಿದಾರರಿಗೆ ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ.

 

ಪ್ರತಿಕ್ರಿಯಿಸಿ (+)