ಭಾನುವಾರ, ಜನವರಿ 26, 2020
29 °C

ಭಗವದ್ಗೀತೆ ಹೆಸರಲ್ಲಿ ಪ್ರಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್, (ಪಿಟಿಐ): ನ್ಯೂಜೆರ್ಸಿ ನಗರಸಭೆಗೆ ಎರಡನೇ ಬಾರಿಗೆ ಮರು ಆಯ್ಕೆಯಾದ ಭಾರತೀಯ ಮೂಲದ ಅಮೆರಿಕದ ವೈದ್ಯ ಡಾ. ಸುಧಾಂಶು ಪ್ರಸಾದ್ ಅವರು ಭಗವದ್ಗೀತೆ ಮೇಲೆ ಪ್ರಮಾಣ ವಚನ ಸ್ವೀಕರಿಸಿದರು.

ಅಂತರರಾಷ್ಟ್ರೀಯ ಔಷಧ ತಜ್ಞರಾಗಿರುವ ಪ್ರಸಾದ್ ಅವರು, ಭಾರತೀಯ ಮೂಲದ ಅಮೆರಿಕನ್ನರು ಹೆಚ್ಚಾಗಿರುವ ಇಸ್ಲಿನ್-ಎಡಿಸನ್ ನಿವಾಸಿಯಾಗಿದ್ದು, 25 ವರ್ಷಗಳಿಂದ ನ್ಯೂಜೆರ್ಸಿಯಲ್ಲಿ ತಂಗಿದ್ದಾರೆ.

`ನಾನು ಭಗವದ್ಗೀತೆಯಲ್ಲಿ ನಂಬಿಕೆ ಹೊಂದಿರುವೆ ಮತ್ತು ಅದರಲ್ಲಿ ನನ್ನ ಮನಸ್ಸಾಕ್ಷಿ ಅಡಗಿದೆ. ಅದರಿಂದ ಅದರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದೆ~ ಎಂದು 57 ವರ್ಷದ ಪ್ರಸಾದ್ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)