ಬುಧವಾರ, ಮೇ 12, 2021
18 °C

ಭಗವಾನ್ ಮಹಾವೀರರ ಅದ್ದೂರಿ ಜಯಂತ್ಯುತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ:  ಅಹಿಂಸೆಯ ಪ್ರತಿಪಾದಕ, ತ್ಯಾಗಿ ಹಾಗೂ ಜೈನ ಬಂಧುಗಳ ಆರಾಧ್ಯದೈವ ಭಗವಾನ್ ಮಹಾವೀರರ ಜಯಂತ್ಯುತ್ಸವವನ್ನು ಜೈನ ಸಮುದಾಯ ಬಾಂಧವರು ಪಟ್ಟಣದಲ್ಲಿ ಬುಧವಾರ ಅತ್ಯಂತ ಸಡಗರ- ಸಂಭ್ರಮದಿಂದ ಅದ್ದೂರಿಯಾಗಿ ಆಚರಿಸಿದರು.ಕೋಟೆ ಪ್ರದೇಶದ ಶಾಂತಿನಾಥ ತೀರ್ಥಂಕರ ಬಸದಿಯಲ್ಲಿ ತೀರ್ಥಂಕರರಿಗೆ ಶ್ರದ್ಧಾ-ಭಕ್ತಿಯಿಂದ ವಿಶೇಷ ಪೂಜಾಧಿಗಳನ್ನು ನೆರವೇರಿಸಿದ ಶಾವಕ-ಶಾವಕಿಯರು, ಬಳಿಕ ಶಾಂತಿ ಹಾಗೂ ಅಹಿಂಸೆಯ ತ್ಯಾಗಮೂರ್ತಿಯಾದ ಭಗವಾನ ಮಹಾವೀರರ ಭಾವಚಿತ್ರವನ್ನು ತಳಿರು-ತೋರಣ ಹಾಗೂ ಪುಷ್ಪಮಾಲೆಗಳ ಅಲಕೃಂತ ವಾಹನದಲ್ಲಿ ಪ್ರತಿಷ್ಠಾಪಿಸಿ, ಮಹಾವೀರರ ತತ್ವ ಸಂದೇಶ ಸಾರುವ ಧ್ವನಿಸುರುಳಿ ಭಿತ್ತರಿಸುತ್ತ ಮೆರವಣಿಗೆ ಆರಂಭಿಸಿದರು. ಕೋಟೆ ಆಂಜನೇಯ ದೇಗುಲ ರಸ್ತೆ, ಹೊಸಪೇಟೆ ರಸ್ತೆ ಮಾರ್ಗವಾಗಿ ಇಜಾರಿ ಸಿರಸಪ್ಪ ವೃತ್ತ, ಬಸ್‌ನಿಲ್ದಾಣ ರಸ್ತೆ, ಬಣಗಾರಪೇಟೆ ಹಾಗೂ ತಾಯಮ್ಮನ ಹುಣಸೆಮರದ ಮೂಲಕ ಆದಿನಾಥ ತೀರ್ಥಂಕರ ಬಸದಿ ತಲುಪಿತು. ನಂತರ ಮಹಾವೀರರಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಪುನಃ ಮೆರವಣಿಗೆ ಶಾಂತಿನಾಥ ಬಸದಿಗೆ ಮರಳಿ  ಮುಕ್ತಾಯವಾಯಿತು.ಸಂಜೆ 5.30ಕ್ಕೆ ಭಗವಾನ ಮಹಾವೀರರ ಬಾಲ್ಯ ಲೀಲೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿದವು.

ಸಮಾಜದ ಮುಖಂಡರಾದ ಎಂ.ಜೆ. ಜಿನದತ್ತಪ್ಪ, ಕೆ. ಮೋಹನ್, ಇಜಾರಿ ಮಹಾವೀರ, ಯು.ಪಿ. ನಾಗರಾಜ, ಪದ್ಮನಾಭ ಬಿಳಿಚೋಡ್, ಪದ್ಮರಾಜ್ ಜೈನ್, ಎಂ. ಅಜಿತ್ ಇತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.