ಮಂಗಳವಾರ, ಮಾರ್ಚ್ 9, 2021
30 °C
ನಿರ್ವಹಣೆ ಕೊರತೆ; ವಿಫಲಗೊಂಡ ಈಚಗೆರೆ–ಕೀಲಾರ ಏತ ನೀರಾವರಿ ಯೋಜನೆ

ಭಗ್ನಗೊಂಡ ರೈತರ ಹಸಿರಿನ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಗ್ನಗೊಂಡ ರೈತರ ಹಸಿರಿನ ಕನಸು

ಕೆರೆಗೋಡು: ಇಲ್ಲಿಗೆ ಸಮೀಪದ ಈಚಗರೆ-–ಕೀಲಾರ ಗ್ರಾಮಗಳ ನಡುವಿನ ಹಳ್ಳದ ಬಳಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ರೈತರಿಗೆ ನೆರವಾಗಲು ಉದ್ದೇಶಿಸಿದ್ದ ಕೀಲಾರ– ಈಚಗೆರೆ ಏತ ನೀರಾವರಿ ಯೋಜನೆ  ನಿರ್ವಹಣೆ ಕೊರತೆಯಿಂದಾಗಿ ವಿಫಲಗೊಂಡಿದೆ.ನಬಾರ್ಡ್‌ ನೆರವಿನಿಂದ 1994–95ರಲ್ಲಿ ₹ 16ಲಕ್ಷ ಆಡಳಿತಾತ್ಮಕ ಅನುಮೋದನೆ ಗೊಂಡು  2007–08ರಲ್ಲಿ ಕಾಮಗಾರಿ ಪೂರ್ಣಗೊಂಡಿತು. ಆದರೆ ಯೋಜನೆ ಪೂರ್ಣಗೊಳ್ಳುವರೆಗೆ ₹ 26.5ಲಕ್ಷ ಈ ಯೋಜನೆಗೆ ವ್ಯಯವಾಯಿತು.ಈ ಯೋಜನೆಯು ಕಾವೇರಿ ಜಲಾಯನ ಪ್ರದೇಶದ 14 ನೇ ನಾಲೆಯ ಕೊನೆಯ ಭಾಗದ 346 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸುವ ಉದ್ದೇಶದಿಂದ ಪ್ರಾರಂಭಿಸಲಾಯಿತು. ಯೋಜನೆ ಸಿದ್ದಗೊಳ್ಳುತ್ತಿದ್ದಂತೆ ರೈತರ ಹಸಿರಿನ ಕನಸು ನನಸಾಗಿ  ರೈತರು ಸಂತಸಗೊಂಡರು.ಆದರೆ ಯೋಜನೆ ಪೂರ್ಣಗೊಂಡ ವರ್ಷದಲ್ಲೇ ಕಳಪೆ ಕಾಮಗಾರಿಯಿಂದಾಗಿ ಯೋಜನೆಗೆ ಅಳವಡಿಸಲಾಗಿದ್ದ ಕೊಳವೆಗಳು ಒಡೆದು ಹಾಳಾದವು. ರೈತರು ಬೆಳೆದ ಬೆಳೆಗಳು ಒಣಗಗೊಡಗಿದವು. ಈ ಮೂಲಕ ರೈತರ ಕನಸು ಭಗ್ನಗೊಂಡಿತು.ಯೋಜನೆ ವೈಫಲ್ಯಕ್ಕೆ ಕಾರಣ: ಯೋಜನೆ ಅಭಿವೃದ್ಧಿ ಗೊಳಿಸುವ ಸಂದರ್ಭದಲ್ಲಿ ಆರ್ ಸಿ ಸಿ ಕೊಳವೆಗಳನ್ನು  ಅಳವಡಿಸ ಲಾಗಿತ್ತು. ಈ ಕೊಳವೆಗಳು ಕಳಪೆಯಾದ್ದರಿಂದ ಒಡೆದು ಹಾಳಾಗಿ, ನೀರೆಲ್ಲ ರೈತರ ಜಮೀನಿನಲ್ಲೇ ಸೋರಿಹೋಯಿತು. ಅಲ್ಲಿಂದ ಇಲ್ಲಿಯವರೆಗೆ ಈ ಯೋಜನೆ ಮತ್ತೆ ಪುನಾರಾರಂಭಗೊಳ್ಳದಿರುವುದು ಈ ಭಾಗದ ರೈತರನ್ನು ಚಿಂತೆಗೀಡು ಮಾಡಿದೆ.ಈಚೆಗೆರೆ ಕೀಲಾರ ಏತನೀರಾವರಿ ಯೋಜನೆಯ ಪುನಶ್ಚೇತನಕ್ಕೆ ಸಮರ್ಪಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸೆಸ್ಕ್‌ಗೆ  ಹೊಸ ವಿದ್ಯುತ್‌ ಪರಿವರ್ತಕ ಅಳವಡಿಕೆಗೆ  ಮನವಿ ಮಾಡಿದ್ದೇವೆ. ಅಲ್ಲಿಂದಲೂ ಸಕರಾತ್ಮಕ ಸ್ಪಂದನೆ ದೊರಕಿದೆ.ಇದಲ್ಲದೇ ಆರ್‌ಸಿಸಿ ಕೊಳವೆಗಳನ್ನು ತೆರವುಗೊಳಿಸಿ ಕಬ್ಬಿಣದ ಏರು ಕೊಳವೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಕೆರಗೋಡು ವಿಭಾಗದ ಎಇ ಬಾಲಸುಬ್ರಹ್ಮಣ್ಯ ಒಟ್ಟಾರೆ ರೈತರ ಹಸಿರಿನ ಕನಸನ್ನು ಈಡೇರಿಸಬೇಕಾದ ಈ ಏತನೀರಾವರಿ ಯೋಜನೆ ಸ್ಥಗಿತಗೊಂಡಿರುವುದು ಇಲ್ಲಿನ ಜನರನ್ನು ಕಂಗೆಡಿಸಿದೆ. ಈ ಕೂಡಲೇ ಈ ಯೋಜನೆ ಪುನಶ್ವೇತನಕ್ಕೆ ಸರ್ಕಾರ ಮುಂದಾಗಬೇಕು ಎನ್ನುವುದು ಇಲ್ಲಿನ ಜನರ ಆಗ್ರಹವೂ ಆಗಿದೆ.***

ಕೀಲಾರ ಈಚೆಗೆರೆ  ಏತ ನೀರಾವರಿ ಯೋಜನೆಯನ್ನು ಪುನಶ್ಚೇತನಗೊಳ್ಳಲು ಶೀಘ್ರದಲ್ಲಿ ಪ್ರಾಮಾಣಿಕ ಯತ್ನ ಕೈಗೊಳ್ಳಲಾಗುವುದು.

-ಬಾಲಸುಬ್ರಹ್ಮಣ್ಯಂ,
ಸಹಾಯಕ ಎಂಜಿನಿಯರ್, ಕಾವೇರಿ ನೀರಾವರಿ ನಿಗಮ, ಕೆರಗೋಡು ವಿಭಾಗ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.