ಭಜ್ಜಿ ವರ್ಷದ ಸಿಖ್ ಕ್ರೀಡಾಪಟು

7

ಭಜ್ಜಿ ವರ್ಷದ ಸಿಖ್ ಕ್ರೀಡಾಪಟು

Published:
Updated:

ಲಂಡನ್ (ಪಿಟಿಐ): ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಅವರಿಗೆ `ವರ್ಷದ ಸಿಖ್ ಕ್ರೀಡಾಪಟು~ ಪ್ರಶಸ್ತಿ ಲಭಿಸಿದೆ.

ಆದರೆ, ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಭಜ್ಜಿ ಗೈರು ಹಾಜರಾಗಿದ್ದರು. ಮುಂಬೈ  ಇಂಡಿಯನ್ಸ್ ತಂಡದ ನಾಯಕರಾಗಿರುವ ಭಜ್ಜಿ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಆದ ಕಾರಣ ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವರಿಗೆ ಸಾಧ್ಯವಾಗಿಲ್ಲ.

ಈ ಸಮಾರಂಭದಲ್ಲಿ ಭಾರತದ ಆಟಗಾರ ಮಾಡಿದ ಸಾಧನೆಯನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಲಾಯಿತು.

ಭಜ್ಜಿ 400 ವಿಕೆಟ್ ಗಳಿಸಿದ 11ನೇ ಆಟಗಾರ ಎನಿಸಿದ್ದಾರೆ.

ಆದರೆ ಕಳಪೆ ಪ್ರದರ್ಶನದ ಕಾರಣದಿಂದ ಇಂಗ್ಲೆಂಡ್ ವಿರುದ್ಧದ ಮೊದಲೆರೆಡು ಏಕದಿನ ಪಂದ್ಯಗಳಿಂದ ತಂಡದಿಂದ ಅವರನ್ನು ಕೈ ಬಿಡಲಾಗಿದೆ.

ಈ ಸಂದರ್ಭದಲ್ಲಿಯೇ ಅವರಿಗೆ ಪ್ರಶಸ್ತಿ ಲಭಿಸಿದೆ. ಏಕದಿನ ಪಂದ್ಯದಲ್ಲಿ 259 ವಿಕೆಟ್ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry