ಭಟ್ಕಳ ಮಲ್ಲಿಗೆಯಿಂದ ಉತ್ಪನ್ನ ತಯಾರಿಕೆಗೆ ಚಿಂತನೆ

ಬುಧವಾರ, ಮೇ 22, 2019
29 °C

ಭಟ್ಕಳ ಮಲ್ಲಿಗೆಯಿಂದ ಉತ್ಪನ್ನ ತಯಾರಿಕೆಗೆ ಚಿಂತನೆ

Published:
Updated:

ಭಟ್ಕಳ: `ಶ್ರೀಗಂಧದಂತೆ ಭಟ್ಕಳ ಸೇರಿದಂತೆ ಕರಾವಳಿಯಲ್ಲಿ ವರ್ಷಪೂರ್ತಿ ದೊರಕುವ ಭಟ್ಕಳ ಮಲ್ಲಿಗೆಯಿಂದ ಎಣ್ಣೆ ತೆಗೆದು ವಿವಿಧ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ಚಿಂತನೆ ನಡೆಸಲಾಗಿದ್ದು, ಇದಕ್ಕಾಗಿ ಯೋಜನೆಯನ್ನು ಸಹ ರೂಪಿಸಲಾಗುತ್ತಿದೆ~ ಎಂದು ಕೆ.ಎಸ್.ಡಿ.ಎಲ್ ಅಧ್ಯಕ್ಷ ಶಿವಾನಂದ ನಾಯ್ಕ ಹೇಳಿದರು.ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಂಪೆನಿಯು ರಾಜ್ಯದ ಕರಾವಳಿ ಜಿಲ್ಲೆಯಲ್ಲೇ ಪ್ರಥಮವೆಂಬಂತೆ ಇಲ್ಲಿನ ಭಟ್ಕಳ ಅರ್ಬನ್ ಬ್ಯಾಂಕ್ ಹಾಲ್‌ನಲ್ಲಿ ಗುರುವಾರದಿಂದ ಒಂದು ವಾರ ಹಮ್ಮಿಕೊಂಡಿರುವ `ಸೋಪ್‌ಸಂತೆ~ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಕರಾವಳಿ ಭಾಗದಲ್ಲಿ ಹೇರಳವಾಗಿ ಬೆಳೆಯುವ ಲಾವಂಚ ಮತ್ತು ಪಚೋಲಿಯನ್ನು ಖರೀದಿಸುವ ಕೆ.ಎಸ್.ಡಿ.ಎಲ್ ಮುಂದೆ ಮಲ್ಲಿಗೆಯ್ನೂ ಖರೀದಿಸಿ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ಚಿಂತನೆ ನಡೆಸಿದ್ದು, ಇದಕ್ಕಾಗಿ ಸರ್ಕಾರಕ್ಕೆ ನೀಡಲು ಪ್ರಸ್ತಾವವನ್ನೂ ಸಿದ್ದಪಡಿಸಲಾಗುತ್ತಿದೆ~ ಎಂದರು.`ರಾಜ್ಯದಲ್ಲಿ ಶ್ರೀಗಂಧ ವಿನಾಶದ ಅಂಚಿನಲ್ಲಿದ್ದು, ಹೊರರಾಜ್ಯಗಳಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇದೆ. ಶ್ರೀಗಂಧ ಬೆಳೆಸಲು ಹಲವಾರು ಕ್ರಮಕೈಗೊಳ್ಳಲಾಗಿದ್ದು, ರೈತರಿಗೆ ಅತಿ ಕಡಿಮೆ ಬೆಲೆಗೆ ಗಂಧದ ಸಸಿಗಳನ್ನು ವಿತರಿಸಲಾಗುತ್ತಿದೆ~ ಎಂದು ಅವರು ಹೇಳಿದರು.ಎಲ್ಲ ವರ್ಗದವರಿಗೂ ದೊರಕುವ ಬೆಲೆಯಲ್ಲಿ ಸುಮಾರು 38 ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರೂ ಸಹ ಇದಕ್ಕೆ ಸಹಕಾರ ನೀಡಬೇಕು ಶಿವಾನಂದ ನಾಯ್ಕ ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಜೆ.ಡಿ.ನಾಯ್ಕ ಮಾತನಾಡಿ, `ಸರ್ಕಾರಿ ಸಂಸ್ಥೆಯಿರಲಿ ಅಥವಾ ಯಾವುದೇ ಸಂಸ್ಥೆಯಿರಲಿ ಅದು ಬೆಳೆಯಬೇಕಾದರೆ ಎಲ್ಲರ ಸಹಕಾರ ಅತ್ಯಗತ್ಯ. ಕಳ್ಳಕಾಕರ ಹಾವಳಿಯಿಂದಾಗಿ ಗಂಧದ ಮರಗಳನ್ನು ಉಳಿಸಿಕೊಳ್ಳುವುದು ಕಷ್ಟಕರವಾಗುತ್ತಿರುವ ಇಂದಿನ ದಿನಗಳಲ್ಲಿ ಅದನ್ನು ಉಳಿಸಿ,ಬೆಳೆಸುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು~ ಎಂದರು.ಇಂದಿನ ಸ್ಪರ್ಧಾತ್ಮಕ ದಿನದಲ್ಲೂ ಅತಿ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಕೆ.ಎಸ್.ಡಿ.ಎಲ್ ಸಂಸ್ಥೆ ರೈತರಿಗೆ ಉತ್ತೇಜನ ನೀಡುವ ಕಾರ್ಯ ಹಮ್ಮಿಕೊಂಡಿರುವುದಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.ಮುಖ್ಯ ಅತಿಥಿಗಳಾಗಿದ್ದ ಪುರಸಭೆ ಅಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿ, `ವಿದೇಶಿ ಸಾಬೂನುಗಳನ್ನೇ ಬಳಸುವ ಇಂದಿನ ದಿನಗಳಲ್ಲಿ ಸ್ವದೇಶಿ ಉತ್ಪನ್ನದ ಬಳಕೆ ಹೆಚ್ಚಬೇಕು. ಸೋಪ್‌ಸಂತೆ ದುಬೈನಂತಹ ದೇಶದಲ್ಲೂ ನಡೆಸುವಂತಾಗಬೇಕು~ ಎಂದು ಸಲಹೆ ನೀಡಿದರು.ಪುರಸಭೆ ಸದಸ್ಯ ಕೃಷ್ಣ ನಾಯ್ಕ ಮಾತನಾಡಿದರು. ವಿಜ್ಞಾನಿ ಅನಂತ ಪದ್ಮನಾಭ್ ಗಂಧದಮರದ ಕೃಷಿಯ ಬಗ್ಗೆ ಅದರಿಂದ ದೊರಕುವ ಲಾಭದ ಬಗ್ಗೆ ಮಾಹಿತಿ ನೀಡಿದರು. ಉಪವಿಭಾಗಾಧಿಕಾರಿ ಅಶೋಕ ನಾಯ್ಕ, ತಾ.ಪಂ.ಅಧ್ಯಕ್ಷ ಪಾರ್ಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.ಸೋಪ್ ಸಂತೆಯಲ್ಲಿ ನೂರಾರು ರೈತರಿಗೆ ತಲಾ ಎರಡಂತೆ ಗಂಧದ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು. ಕಂಪೆನಿಯ ಆಡಳಿತ ನಿರ್ದೇಶಕ ಯಶ್ವಂತ್ ಸ್ವಾಗತಿಸಿದರು.ಪ್ರಧಾನ ವ್ಯವಸ್ಥಾಪಕ ವಸಂತಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಗಂಗಾಧರ ನಾಯ್ಕ ನಿರೂಪಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry