ಭತ್ತಕ್ಕೆ ಬೆಂಕಿ ರೋಗ; ನಿವಾರಣೆಗೆ ಪ್ರಾತ್ಯಕ್ಷಿಕೆ

7

ಭತ್ತಕ್ಕೆ ಬೆಂಕಿ ರೋಗ; ನಿವಾರಣೆಗೆ ಪ್ರಾತ್ಯಕ್ಷಿಕೆ

Published:
Updated:

ನಂಜನಗೂಡು: ತಾಲ್ಲೂಕಿನ ಹಲವೆಡೆ ಬತ್ತದ ಬೆಳೆಗೆ ಗರಿ ಸುತ್ತ ಹುಳ, ಕೊಳವೆ ಹುಳ, ಬೆಂಕಿ ರೋಗ ಕಾಣಿಸಿ­ಕೊಂಡಿರುವ ಹಿನ್ನಲೆಯಲ್ಲಿ ಚಿಕ್ಕಯ್ಯನ­ಛತ್ರ ಹೋಬಳಿ ಏಚಗಳ್ಳಿ ಗ್ರಾಮದಲ್ಲಿ ಈಚೆಗೆ ನಡೆದ ರೈತ ಪಾಠಶಾಲೆಯಲ್ಲಿ ಕೃಷಿ ವಿಜ್ಞಾನಿ ಡಾ.ಅರಸು ಮಲ್ಲಯ್ಯ ರೋಗ ನಿವಾರಣೆ ಕುರಿತ ಪ್ರತಾಕ್ಷಿಕೆ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೇವಿನ ಮೂಲದ ಕೀಟ ನಾಶಕ ಅಥವಾ 2 ಮಿ. ಲೀಟರ್‌ ಪ್ರಮಾಣದ ಎಕಾಲಕ್ಸ್ ದ್ರಾವಣವನ್ನು ಪ್ರತಿ ಲೀಟರ್‌ ನೀರಿಗೆ ಬೆರೆಸಿ ಅಥವಾ ಮಾನೋಕ್ರೊಟೊಫಾಸ್‌ ಅನು್ನ 1.5 ಲೀಟರ್‌ ನೀರಿಗೆ ಬೆರಸಿ ಸಿಂಪರಣೆ ಮಾಡಬೇಕು.ಇದರ ಜೊತೆಗೆ 1 ಗ್ರಾಂ ಬಾವಿಸ್ಟನ್ ಅನ್ನು ಒಂದು ಲೀಡರ್‌ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಮೇಲು ಗೊಬ್ಬವಾಗಿ ಯೂರಿಯಾ ಕೊಡಬಾರದು. ನಂತರ ನೀರನ್ನು ಹೊರ­­- ತೆಗೆದು ಬತ್ತ ಸುಟ್ಟ ಬೂದಿಯನ್ನು  ರೋಗ ಬಂದಿರುವ ಜಾಗಕ್ಕೆ ನೀಡಬೇಕು, ತೆಂಡೆ ಹೊಡೆ­ಯುವ ಸಂದರ್ಭದಲ್ಲಿ ರೋಗ ಇಲ್ಲದ ಕಡೆ ಎಕರೆಗೆ ಎಕರೆಗೆ 22 ಕೆ.ಜಿ. ಯೂರಿಯಾ ಗೊಬ್ಬರವನು್ನ 8–10 ದಿನ ತಡೆದು ಮೇಲು ಗೊಬ್ಬರ­ವಾಗಿ ಒದಗಿಸಬೇಕು. 2ದಿನ ನೀರನ್ನು ಕಟ್ಟ­ಬೇಕು.ತೆಂಡ ಹೊಡೆಯುವ ಹಂತದಲ್ಲಿ 2 ಅಂಗುಲ ನೀರು ನಿಲ್ಲುವಂತೆ ನೋಡಿ ಕೊಳ್ಳಬೇಕು ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry