ಶುಕ್ರವಾರ, ನವೆಂಬರ್ 15, 2019
21 °C

ಭತ್ತ: ಕನಿಷ್ಠ ಬೆಂಬಲ ಬೆಲೆ ಹೆಚ್ಚಳ

Published:
Updated:

ನವದೆಹಲಿ: ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್‌ಗೆ 80 ರೂಪಾಯಿಯಷ್ಟು ಏರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಳೆದ ವರ್ಷ ಕ್ವಿಂಟಲ್‌ಗೆ ಸಾಮಾನ್ಯ ದರ್ಜೆಯ ಭತ್ತಕ್ಕೆ 1000 ರೂಪಾಯಿ ಹಾಗೂ ಎ ದರ್ಜೆಯ ಭತ್ತಕ್ಕೆ 1030 ರೂಪಾಯಿ ಬೆಂಬಲ ಬೆಲೆ ನಿರ್ಧರಿಸಲಾಗಿತ್ತು.

 

ಈಗ 2010-11ರ ಸಾಲಿನ ಖಾರಿಫ್ ಬೆಳೆಯ ಎರಡೂ ವಿಧದ ಭತ್ತಕ್ಕೆ ಈ ಏರಿಕೆ ಅನ್ವಯಿಸಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಕೃಷಿ ಸಚಿವಾಲಯವು ಕನಿಷ್ಠ ಬೆಂಬಲ ಬೆಲೆಯನ್ನು ರೂ 160ಕ್ಕೆ ಹೆಚ್ಚಿಸಲು ಪ್ರಸ್ತಾವ ಇರಿಸಿತ್ತು. 

ಪ್ರತಿಕ್ರಿಯಿಸಿ (+)