ಮಂಗಳವಾರ, ಜನವರಿ 21, 2020
19 °C

ಭದ್ರಗಿರಿ ಕೇಶವದಾಸರ ಪುಣ್ಯಾರಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ: ತಾಲ್ಲೂಕಿನ ಅರಿಶಿನ­ಕುಂಟೆಯ ವಿಶ್ವಶಾಂತಿ ಆಶ್ರಮದ ಸಂಸ್ಥಾಪಕ ಸದ್ಗುರು ಸಂತ ಭದ್ರಗಿರಿ ಕೇಶವದಾಸರ 16ನೇ ಪುಣ್ಯಾರಾಧನಾ ಮಹೋತ್ಸವವನ್ನು ಶನಿವಾರ ಮತ್ತು ಭಾನುವಾರ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ.

 

ಪುಣ್ಯಾರಾಧನೆ ಪ್ರಯುಕ್ತ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಲೇಖನ ಸಾಮಗ್ರಿಗಳು ನೀಡಲಾಗುತ್ತದೆ. ಅಲ್ಲದೇ ಅಂಧ ಮಕ್ಕಳಿಗೆ ವಸ್ತ್ರಗಳನ್ನು ವಿತರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ  ಸಂತ ಭದ್ರಗಿರಿ ಸರ್ವೋತ್ತಮ ಅವರು ಆರ್ಶೀವಚನ ನೀಡಲಿದ್ದಾರೆ. ಭಾನುವಾರ ಗೋಂಧಿ ಸಂಸ್ಥಾನ ಮಠದ ನಾಮದೇವಾನಂದ ಭಾರತಿ ಸ್ವಾಮೀಜಿ ಅವರಿಂದ ಭಜನೆ ನಡೆಯಲಿದೆ. 36ಅಡಿ ಎತ್ತರದ ಏಕಶಿಲಾ ವಿಶ್ವರೂಪ ವಿಜಯ ವಿಠಲ ದೇವರಿಗೆ ಮಹಾ ಕುಂಭಾಭಿಷೇಕ ಹಮ್ಮಿಕೊಳ್ಳಲಾಗಿದೆ.

ಪ್ರತಿಕ್ರಿಯಿಸಿ (+)