ಭದ್ರತಾ ನಿಧಿ ವಂಚನೆ ಬಯಲು: ಪೊಲೀಸರೇ ಆರೋಪಿಗಳು

7

ಭದ್ರತಾ ನಿಧಿ ವಂಚನೆ ಬಯಲು: ಪೊಲೀಸರೇ ಆರೋಪಿಗಳು

Published:
Updated:

ನ್ಯೂಯಾರ್ಕ್‌ (ಪಿಟಿಐ): ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದಿದ್ದ 9/11ರ ಭಯೋತ್ಪಾದನಾ ದಾಳಿಯ ಸಂತ್ರಸ್ತರಿಗೆ ಮೀಸ­­ಲಾಗಿರಿಸಿದ್ದ ಲಕ್ಷಾಂತರ ಡಾಲರ್‌ ನಿಧಿ­ಯನ್ನು ನ್ಯೂಯಾ­­ರ್ಕ್‌ನ ಮಾಜಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಹಲವರು ತಮ್ಮ ಐಷಾರಾಮಿ ಜೀವ­ನಕ್ಕೆ ಬಳಸಿ­ಕೊಂಡು ವಂಚನೆ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ.ಮ್ಯಾನ್‌ಹಟನ್‌ನ ಜಿಲ್ಲಾ ಅಟಾರ್ನಿ ಅವರ ಕಚೇರಿ ಮಂಗಳ­ವಾರ ಬಿಡುಗಡೆ ಮಾಡಿರುವ ಆರೋ­ಪಿ­ಗಳ ಪಟ್ಟಿಯಲ್ಲಿ 106 ಜನರನ್ನು ಹೆಸರಿಸಲಾಗಿದೆ. ಇದರಲ್ಲಿ ನ್ಯೂಯಾ­ರ್ಕ್‌ನ ಮಾಜಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸೇರಿದ್ದಾರೆ. ಇವರಲ್ಲಿ ನಾಲ್ವರ ವಿರುದ್ಧ ಭಾರಿ ವಂಚನೆ ಎಸಗಿದ ಆರೋಪ ಹೊರಿಸಲಾಗಿದೆ.ವಂಚಕರ ತಂಡದ ನೇತೃತ್ವವನ್ನು 83 ವರ್ಷದ ರೇಮಂಡ್‌ ಲ್ಯಾವೆಲ್ಲೆ ಎಂಬಾತ  ಹೊತ್ತಿದ್ದ. ಮೂಲತಃ ವಕೀಲನಾಗಿದ್ದ ರೇಮಂಡ್‌, ಎಫ್‌ಬಿ­ಐಯ ಏಜೆಂಟ್‌ ಆಗಿ ವೃತ್ತಿ ಆರಂಭಿ­ಸಿದ್ದ. ನಸ್ಸಾವು ಕೌಂಟಿಯ ಹಿರಿಯ ಪ್ರಾಸಿಕ್ಯೂಟರ್‌ ಆಗಿಯೂ ಕಾರ್ಯನಿ­ರ್ವ­ಹಿಸಿದ್ದ ಎಂದು ಹೇಳಿಕೆ ತಿಳಿಸಿದೆ.ಪಿಂಚಣಿ ಸಲಹೆಗಾರನಾಗಿದ್ದ ಥಾಮಸ್‌ ಹಾಲೆ (89) ಮತ್ತು ಮಾಜಿ ಪೊಲೀಸ್‌ ಅಧಿಕಾರಿ ಜೋಸೆಫ್‌ ಮಿನರ್ವಾ (61)  ಅವರೊಂದಿಗೆ ಸೇರಿ ಲ್ಯಾವೆಲ್ಲಾ ಈ ವಂಚನೆ ಎಸಗಿದ್ದಾನೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.ಹಗರಣಕ್ಕೆ ಆಘಾತ ವ್ಯಕ್ತಪಡಿಸಿರುವ ಮ್ಯಾನ್‌ಹಟನ್‌ ಅಟಾರ್ನಿ ಜನರಲ್‌ ಸೈರಸ್‌ ವಾನ್ಸೆ, ‘ಈ ನಿರ್ಲಜ್ಜತನ ಆಘಾತಕಾರಿ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry