ಭದ್ರಾ ಜಲಾಶಯದ ನೀರಿನ ಮಟ್ಟ ಏರಿಕೆ

ಸೋಮವಾರ, ಜೂಲೈ 22, 2019
27 °C

ಭದ್ರಾ ಜಲಾಶಯದ ನೀರಿನ ಮಟ್ಟ ಏರಿಕೆ

Published:
Updated:

ಶಿವಮೊಗ್ಗ: ಭದ್ರಾ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಾದ ಪರಿಣಾಮ ಆ ಜಲಾಶಯದ ನೀರಿನ ಮಟ್ಟದಲ್ಲಿ ಸೋಮವಾರ 1ಅಡಿ ಏರಿಕೆ ಕಂಡು ಬಂದಿದೆ. ಒಳಹರಿವು 2,554 ಕ್ಯೂಸೆಕ್‌ನಷ್ಟು ಹೆಚ್ಚಾಗಿದ್ದು, ನೀರಿನ ಮಟ್ಟ 143 ಅಡಿ, 3 ಇಂಚಿಗೆ ಏರಿದೆ. ಉಳಿದಂತೆ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿ ಗರಿಷ್ಠ 51.6 ಮಿ.ಮೀ. ಮಳೆಯಾಗಿದೆ. ಯಡೂರು 58 ಮಿ.ಮೀ., ಹುಲಿಕಲ್ 48 ಮಿ.ಮೀ, ತೀರ್ಥಹಳ್ಳಿಯಲ್ಲಿ 18.2 ಮಿ.ಮೀ, ಆಗುಂಬೆಯಲ್ಲಿ 39.4 ಮಿ.ಮೀ. ಮಳೆ ಸುರಿದಿದೆ.ಅದರಂತೆ ಶಿವಮೊಗ್ಗ 10.2 ಮಿ.ಮೀ., ಸಾಗರ, ಸೊರಬ ತಲಾ 6 ಮಿ.ಮೀ, ಭದ್ರಾವತಿ 3, ಶಿಕಾರಿಪುರದಲ್ಲಿ 1.2 ಮಿ.ಮೀ. ಮಳೆಯಾಗಿದೆ.ದಾವಣಗೆರೆ ವರದಿ: ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಸೋಮವಾರ ಬೆಳಿಗ್ಗೆವರೆಗೆ ಸರಾಸರಿ 0.6 ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ. ಯಾವುದೇ ಹಾನಿ ಸಂಭವಿಸಿಲ್ಲ. ಸೋಮವಾರ ಮಧ್ಯಾಹ್ನದ ವೇಳೆಗೆ ಹರಿಹರ, ಹರಪನಹಳ್ಳಿ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಹರಪನಹಳ್ಳಿಯ ಹಲುವಾಗಲು, ನಿಟ್ಟೂರು, ಗರ್ಭಗುಡಿ ಪ್ರದೇಶಕ್ಕೆ ಇದು ವರ್ಷದ ಪ್ರಥಮ ಉತ್ತಮ ಮಳೆ ಎಂದು ಗ್ರಾಮಸ್ಥರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry