ಭದ್ರಾ ಮೇಲ್ದಂಡೆ: ಬಿ ವರದಿ ತಿರಸ್ಕೃತ, ಬಿಎಸ್ ವೈ ಮತ್ತಷ್ಟು ಹೊಡೆತ

7

ಭದ್ರಾ ಮೇಲ್ದಂಡೆ: ಬಿ ವರದಿ ತಿರಸ್ಕೃತ, ಬಿಎಸ್ ವೈ ಮತ್ತಷ್ಟು ಹೊಡೆತ

Published:
Updated:

ಬೆಂಗಳೂರು (ಪಿಟಿಐ): ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸುತ್ತಿಕೊಂಡಿರುವ ಹಗರಣಗಳ ಕಬಂಧಬಾಹು ಮತ್ತಷ್ಟು ಬಿಗಿಯಾಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಪೊಲೀಸರು ಸಲ್ಲಿಸಿದ್ದ `ಬಿ~ ವರದಿಯನ್ನು ಲೋಕಾಯುಕ್ತ ನ್ಯಾಯಾಲಯ ಸಾರಾಸಗಟಾಗಿ ಶನಿವಾರ ತಿರಸ್ಕರಿಸಿ ಮತ್ತಷ್ಟು ತನಿಖೆಗೆ ಆದೇಶಿಸಿದೆ.ನ್ಯಾಯಾಧೀಶ ಎನ್.ಕೆ. ಸುಧೀಂದ್ರರಾವ್ ಅವರು ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ `ಬಿ~ ರಿಪೋರ್ಟ್‌ನ್ನು ತಿರಸ್ಕರಿಸಿ 21 ದಿನಗಳಲ್ಲಿ ಹೆಚ್ಚಿನ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿ ಪ್ರಕರಣದ ವಿಚಾರಣೆಯನ್ನು ಜೂನ್ 18ಕ್ಕೆ ಮುಂದೂಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry