ಗುರುವಾರ , ಮೇ 26, 2022
32 °C

ಭಯೋತ್ಪಾದಕರ ದಾಳಿಯ ಆತಂಕ ಇದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಎಪಿ): ಸೆಪ್ಟೆಂಬರ್ 11ರ ಘಟನೆಯ ಬಳಿಕ ಇಂಗ್ಲೆಂಡ್ ಹಲವು ಸಲ ಭಯೋತ್ಪಾದಕ ದಾಳಿಯ ಭೀತಿಗೆ ಒಳಗಾಗಿತ್ತು. ಆದ್ದರಿಂದ ಮುಂಬರುವ ಒಲಿಂಪಿಕ್ಸ್ ಸಂದರ್ಭವೂ ಇಂತಹ ಬೆದರಿಕೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಇಂಗ್ಲೆಂಡ್‌ನ ಗುಪ್ತಚರ ಸಂಸ್ಥೆ `ಎಂಐ5~ನ (ಮಿಲಿಟರಿ ಇಂಟೆಲಿಜೆನ್ಸ್, ಸೆಕ್ಸನ್ 5) ಮುಖ್ಯಸ್ಥ ಜೊನಾಥನ್ ಎವಾನ್ಸ್ ತಿಳಿಸಿದ್ದಾರೆ.

`9/11ರ ಘಟನೆಯ ಬಳಿಕ ಬ್ರಿಟನ್‌ನಲ್ಲಿ ಪ್ರತಿ ವರ್ಷ ಒಂದಲ್ಲ ಒಂದು ರೀತಿಯ ಭಯೋತ್ಪಾದಕ ದಾಳಿಯ ಪ್ರಯತ್ನ ನಡೆದಿದೆ~ ಎಂದು ಅವರು ಹೇಳಿದ್ದಾರೆ. `ಆದರೆ ಒಲಿಂಪಿಕ್ಸ್ ಕೂಟ ಅಷ್ಟು ಸುಲಭದಲ್ಲಿ ದಾಳಿಗೆ ತುತ್ತಾಗದು. ನಾವು ಈ ಹಿಂದೆ ಉಗ್ರರ ಹಲವು ಸಂಚುಗಳನ್ನು ವಿಫಲಗೊಳಿಸಿದ್ದೇವೆ. ಆದ್ದರಿಂದ ಒಲಿಂಪಿಕ್ಸ್ ತಾಣ ಮಾತ್ರವಲ್ಲ, ಇಂಗ್ಲೆಂಡ್‌ನ ಯಾವುದೇ ಭಾಗದಲ್ಲೂ ಭಯೋತ್ಪಾದಕರಿಗೆ ದಾಳಿ ನಡೆಸುವುದು ಕಷ್ಟ~ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.