ಗುರುವಾರ , ಆಗಸ್ಟ್ 5, 2021
21 °C

ಭಯೋತ್ಪಾದಕರ ವಿರುದ್ಧ ಯುದ್ಧ ನಿಂತಿಲ್ಲ- ಹಿಲರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಒಸಾಮ ಬಿನ್ ಲಾಡೆನ್ ಕೊಂದ ಮಾತ್ರಕ್ಕೆ ಭಯೋತ್ಪಾದಕರ ವಿರುದ್ಧದ ಯುದ್ಧ ಕೊನೆಗೊಂಡಂತೆ ಅಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹೇಳಿದ್ದಾರೆ.ತಾಲಿಬಾನ್ ಇನ್ನು ಮುಂದಾದರೂ ಪಾಠ ಕಲಿತು ಶಾಂತಿಯುತ ಮಾರ್ಗದಲ್ಲಿ ಆಫ್ಘಾನಿಸ್ತಾನದಲ್ಲಿ ರಾಜಕೀಯದಲ್ಲಿ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಅವರು ಎಚ್ಚರಿಸಿದರು.ಲಾಡೆನ್ ವಿರುದ್ಧದ ಕಾರ್ಯಾಚರಣೆಯನ್ನು ‘ಮಹತ್ವದ ಮೈಲುಗಲ್ಲು’ ಎಂದು ಬಣ್ಣಿಸಿದ ಹಿಲರಿ, ಭಯೋತ್ಪಾದಕ ಸಂಘಟನೆಗಳ ವಿರುದ್ಧ ಯುದ್ಧ ಮುಂದುವರೆಯಲಿದೆ. ಜತೆಗೆ ಭಯೋತ್ಪಾದನೆ ನಿಗ್ರಹದಲ್ಲಿ ಪಾಕಿಸ್ತಾನ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯದ ಜತೆ ಅಮೆರಿಕ ಇರಲಿದೆ ಎಂದೂ ಭರವಸೆ ನೀಡಿದರು.ಅಲ್ ಖೈದಾ ಜತೆಗಿನ ಮೈತ್ರಿಯನ್ನು ಕಡಿದುಕೊಂಡು ಆಫ್ಘಾನಿಸ್ತಾನದಲ್ಲಿ ಶಾಂತಿಯುತ ರಾಜಕೀಯ ಮಾಡುವಂತೆ ಅವರು ತಾಲಿಬಾನ್‌ಗೆ ಸಲಹೆ ಮಾಡಿದರು.ಭಯೋತ್ಪಾದನೆ ವಿರುದ್ಧದ ಹೋರಾಟ ಮುಂದುವರೆಸಬೇಕಾಗಿದೆ. ಲಾಡೆನ್ ಹತ್ಯೆ ಮಾಡಿದ ಮಾತ್ರಕ್ಕೆ ಅದು ಕೊನೆಯಲ್ಲ. ಅಲ್ ಖೈದಾ ಹಾಗೂ ಅದರ ಇತರ ಸಂಘಟನೆಗಳು ಕ್ರಿಯಾಶೀಲವಾಗಿದ್ದು, ಬೆದರಿಕೆ ಇದೆ. ಇದನ್ನು ಬಗ್ಗುಬಡಿಯುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಸಹಕಾರ ಬೇಕಾಗುತ್ತದೆ ಎಂದು ಹಿಲರಿ ಕ್ಲಿಂಟನ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.