ಭಯೋತ್ಪಾದನೆಗೆ ವಿದೇಶಿ ಹಣ: ಕಳವಳ

7

ಭಯೋತ್ಪಾದನೆಗೆ ವಿದೇಶಿ ಹಣ: ಕಳವಳ

Published:
Updated:

ಶ್ರೀರಂಗಪಟ್ಟಣ: ‘ವಿದೇಶಿ ಹಣವನ್ನು ಭಯೋತ್ಪಾದನೆ ಕೃತ್ಯಕ್ಕೆ ಬಳಸುತ್ತಿದ್ದು ದೇಶದ ಆಂತರಿಕ ಭದ್ರತೆ, ನೆಮ್ಮದಿಗೆ ಭಂಗ ಉಂಟಾಗುತ್ತಿದೆ ‘ಎಂದು ಗಾಂಧಿ ಅನುಯಾಯಿಗಳು ಕಳವಳ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಶುಕ್ರವಾರ ನಡೆದ ಗಾಂಧಿ ಪ್ರಣೀತ ಸರ್ವೋದಯ ಮೇಳದ ಎರಡನೇ ದಿನದ ಗೋಷ್ಠಿ ಯಲ್ಲಿ ‘ದೇಶದ ಅಭಿವೃದ್ಧಿಗೆ ವಿದೇಶಿ ಹಣ ಬೇಕೆ’ ವಿಷಯ ಕುರಿತ ಚರ್ಚೆ ಯಲ್ಲಿ ಪ್ರೊ.ಜಿ.ಎಸ್.ಜಯದೇವ, ಸುರೇಂದ್ರ ಕೌಲಗಿ, ಹೊ.ಶ್ರೀನಿವಾ ಸಯ್ಯ ಇತರರು ಆತಂಕ ವ್ಯಕ್ತಪಡಿಸಿದರು. ‘ಐಟಿ/ಬಿಟಿ ಮೂಲಕ ವಿದೇಶಿ ಹಣ ದೇಶದೊಳಕ್ಕೆ ಬರುತ್ತಿದೆ. ಆದರೆ ಕೊಳ್ಳುಬಾಕ ಸಂಸ್ಕೃತಿ ಪರಿಣಾಮ ಆ ಹಣ ಮತ್ತೆ ಪರದೇಶಕ್ಕೆ ಹರಿದು ಹೋಗುತ್ತಿದೆ. ಕಾನೂನು ಬಾಹಿರ ಚಟುವಟಿಕೆಗೆ ಅದು ಬಳಕೆಯಾಗು ತ್ತಿದೆ. ಮನುಷ್ಯ ಜೀವನ ಸರಳ ಗೊಳಿಸುವ, ಮೌಲ್ಯಗಳನ್ನು ಎತ್ತಿ ಹಿಡಿಯುವ, ಗಾಂಧಿ ವಿಚಾರಧಾರೆ ಬಿತ್ತುವುದು ಇಂದಿನ ಅಗತ್ಯವಾಗಿದೆ.‘ಅಣುಬಾಂಬ್ ತಯಾರಿಕೆಯಲ್ಲಿ ತೊಡಗಿದವರಿಗೆ ಭಾರತ ರತ್ನ ಪುರಸ್ಕಾರ ನೀಡುವ ಮಟ್ಟಕ್ಕೆ ಪರಿಸ್ಥಿತಿ ಹೋಗಿದೆ. ಕೇವಲ 10 ಬಾಂಬ್ ಬಿದ್ದರೆ ಅರ್ಧ ಜಗತ್ತು ನಾಶವಾಗು ತ್ತದೆ. ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ 36 ಸಾವಿರ ಅಣು ಬಾಂಬ್‌ಗಳ ಸಂಗ್ರಹವಿದೆ. ಸರ್ವೋ ದಯ ಪರಿಕಲ್ಪನೆ ಸಾಕಾರಕ್ಕೆ ಪ್ರಯತ್ನಿಸುವ ಗೊಡವೆ ಯಾರಿಗೂ ಬೇಡವಾಗಿದೆ’ ಎಂದು ಪ್ರೊ.ಜಯ ದೇವ ಹೇಳಿದರು.ಸ್ವದೇಶಿ, ಸ್ವಾಭಿಮಾನ, ಸ್ವಾವ ಲಂಬನೆ ಚಿಂತನೆಯಲ್ಲಿ ತೊಡಗಿರುವ ನಾವು ವಿದೇಶಿ ಧನ ಬೇಡುವುದು ಆತ್ಮಘಾತುಕ ಅಂಶ’ ಎಂದು ಸುರೇಂದ್ರ ಕೌಲಗಿ ತಿಳಿಸಿದರು.

‘ರೈತ ಬಳಸುವ ಬೀಜ, ಗೊಬ್ಬರ, ಅನ್ನ ಎಲ್ಲವೂ ವಿದೇಶಿಮಯ, ವಿಷಮಯವಾಗುತ್ತಿದೆ. ಹಣದಿಂದ ಸಂತೋಷ, ಆನಂದ ಸಾಧ್ಯವಿಲ್ಲ. ಸಮಸ್ಯೆಗಳಿಗೆ ಗಾಂಧಿ ಮಾರ್ಗ ಒಂದೇ ಪರಿಹಾರ’ ಎಂದು ಹೊ. ಶ್ರೀನಿವಾಸಯ್ಯ ಹೇಳಿದರು.ಬಸವೇಗೌಡ, ಎಂ.ಮುಸ್ತಫಾ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಸ್ವಾತಂತ್ರ್ಯ ಹೋರಾಟಗಾರ ಡಾ.ಸಿ. ಬಂದೀಗೌಡ, ಮಾಜಿ ಶಾಸಕ ಡಿ.ಮಾದೇಗೌಡ, ತೈಲೂರು ವೆಂಕಟ ಕೃಷ್ಣ, ಎಚ್.ಎಲ್. ಕೇಶವ ಮೂರ್ತಿ, ಹರವು ದೇವೇಗೌಡ, ಅ.ಸಿ. ಸಿದ್ದೇಗೌಡ, ಹೊನ್ನಯ್ಯ, ಅಂಕೇಗೌಡ, ಚಂದ್ರಶೇಖರ್, ಎಸ್.ಲಿಂಗಣ್ಣ, ಎಸ್.ಎಲ್.ಲಿಂಗರಾಜು, ಮಂಜು ನಾಥ್, ಎಸ್.ಆರ್. ರಾಮಚಂದ್ರ ರಾವ್, ಎಸ್.ಆರ್. ಪ್ರಸನ್ನಕುಮಾರ್ ಇತರರು ಇದ್ದರು.ಸತ್ಯವ್ರತ ಸ್ಮರಣೆ: ಮೇಳದಲ್ಲಿ ಗಾಂಧಿವಾದಿ ದಿವಂಗತ ಸತ್ಯವ್ರತ ಕುರಿತು ಸುರೇಂದ್ರ ಕೌಲಗಿ ಬರೆದಿರುವ ‘ಸತ್ಯವ್ರತ; ಸರ್ವೋದಯ ಶ್ರದ್ಧಾಳು’ ಕೃತಿಯನ್ನು ಎಚ್.ಎಸ್.ದೊರೆಸ್ವಾಮಿ ಬಿಡುಗಡೆ ಮಾಡಿದರು.ಲಕ್ಷ್ಮಿ ಸತ್ಯವ್ರತ, ಬೆಂಗಳೂರು ವಿಶ್ವ ವಿದ್ಯಾನಿಲಯ ಗಾಂಧಿ ಭವನದ ನಿರ್ದೇಶಕ ಡಾ.ಜೀವನ್‌ಕುಮಾರ್, ಡಾ.ಪದ್ಮ, ಡಾ.ಸುಜಯಕುಮಾರ್, ಸುರೇಂದ್ರ ಕೌಲಗಿ ಸತ್ಯವ್ರತ ಅವರ ಪ್ರಖರ ಪಾಂಡಿತ್ಯ, ಸರಳತೆಯನ್ನು ಸ್ಮರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry