ಶನಿವಾರ, ನವೆಂಬರ್ 23, 2019
18 °C

ಭಯೋತ್ಪಾದನೆ: 21 ಮಂದಿಗೆ ಗಲ್ಲು

Published:
Updated:

ಬಾಗ್ದಾದ್ (ಎಎಫ್‌ಪಿ): ಭಯೋತ್ಪಾದಕ ಕೃತ್ಯ ನಡೆಸಿದ ಆರೋಪದ ಮೇಲೆ ಇರಾಕ್‌ನಲ್ಲಿ ಒಂದೇ ದಿನ 21 ಮಂದಿಯನ್ನು ಗಲ್ಲಿಗೇರಿಸಲಾಗಿದೆ.ಇರಾಕ್‌ನ ಈ ಕ್ರಮದ ಬಗ್ಗೆ ವಿಶ್ವವ್ಯಾಪಿ ಖಂಡನೆ ವ್ಯಕ್ತವಾಗಿದೆ. ಮಂಗಳವಾರ ಗಲ್ಲಿಗೇರಿಸಲಾದ ಎಲ್ಲರೂ ಇರಾಕ್‌ನವರೇ ಆಗಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ. ಇದರೊಂದಿಗೆ ಈ ವರ್ಷದಲ್ಲಿ ಭಯೋತ್ಪಾದನೆ ಸಂಚು ಮತ್ತು ಕೃತ್ಯ ಎಸಗಿಸ ಆರೋಪದ ಮೇಲೆ ಗಲ್ಲಿಗೇರಿಸಲಾದವರ ಸಂಖ್ಯೆ 50ಕ್ಕೆ ಏರಿದೆ.

ಪ್ರತಿಕ್ರಿಯಿಸಿ (+)