ಭರಚುಕ್ಕಿಯಲ್ಲಿ ಇಬ್ಬರು ಯುವಕರ ಸಾವು

7

ಭರಚುಕ್ಕಿಯಲ್ಲಿ ಇಬ್ಬರು ಯುವಕರ ಸಾವು

Published:
Updated:

ಕೊಳ್ಳೇಗಾಲ: ತಾಲ್ಲೂಕಿನ ಭರಚುಕ್ಕಿ ಜಲಪಾತದಲ್ಲಿ ಸ್ನಾನ ಮಾಡಲು ಹೋಗಿದ್ದ ಯುವಕರಿಬ್ಬರು ಮುಳುಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.ಬೆಂಗಳೂರಿನ ಎನ್‌ಟಿಟಿ ಕಂಪೆನಿ ಎಂಜಿನಿಯರ್ ಸಂತೋಷ್ (22), ದೀಪಕ್ (22) ಮೃತರು. ದೀಪಕ್ ಬೆಂಗಳೂರು ನಿವಾಸಿ. ಸಂತೋಷ್ ಹೈದರಾಬಾದ್ ಮೂಲದವರು.ಶಿವನಸಮುದ್ರ ಜಲಪಾತ ವೀಕ್ಷಿಸಲು  ಎನ್‌ಟಿಟಿ ಕಂಪೆನಿಯ 21 ಉದ್ಯೋಗಿಗಳು ಬಂದಿದ್ದರು. ಭರಚುಕ್ಕಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಸಂತೋಷ್ ಮತ್ತು ದೀಪಕ್ ಮುಳುಗಿ ಸಾವನ್ನಪ್ಪಿದ್ದಾರೆ.ಸ್ನೇಹಿತರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದರು. ಸಬ್ ಇನ್‌ಸ್ಪೆಕ್ಟರ್ ಪುಟ್ಟಸ್ವಾಮಿ ಸ್ಥಳಕ್ಕೆ ಧಾವಿಸಿ ನುರಿತ ಈಜುಗಾರರ ಮೂಲಕ ದೀಪಕ್ ದೇಹವನ್ನು ಹೊರತೆಗೆದರು. ಸಂತೋಷ್ ದೇಹಕ್ಕೆ ಹುಡುಕಾಟ ಮುಂದುವರಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry