ಭರತನಾಟ್ಯ, ರಂಗಪ್ರವೇಶ

7

ಭರತನಾಟ್ಯ, ರಂಗಪ್ರವೇಶ

Published:
Updated:
ಭರತನಾಟ್ಯ, ರಂಗಪ್ರವೇಶ

ನಾಟ್ಯನಿಕೇತನ: ಶನಿವಾರ ಗುರು ರೇವತಿ ನರಸಿಂಹನ್ ಅವರ ಶಿಷ್ಯೆ ಎಂ.ಬಿ. ಐಶ್ವರ್ಯ ಭರತನಾಟ್ಯ ರಂಗಪ್ರವೇಶ, ಅತಿಥಿಗಳು:ಉಷಾ ದಾತಾರ್, ಪತ್ರಕರ್ತ ಗರುಡನಗಿರಿ ನಾಗರಾಜ್, ಡಾ. ಶ್ಯಾಮಲಾ ಭಾವೆ.ಮೂರುವರೆ ವರ್ಷದವಳಿದ್ದಾಗಲೇ ಕೋಣನಕುಂಟೆಯ ಜ್ಯೋತಿ ಅವರ ಬಳಿ ಭರತನಾಟ್ಯ ಕಲಿಯಲಾರಂಭಿಸಿದ ಐಶ್ವರ್ಯ, ನಂತರ ಸೀತಾ ಕೋಟೆ ಮತ್ತು ಶ್ರೀಧರ್ ಅವರ ಬಳಿ ಕೌಶಲ್ಯ ಹೆಚ್ಚಿಸಿಕೊಂಡಳು. ಭರತನಾಟ್ಯ ಪ್ರಕಾರದಲ್ಲಿ ಮತ್ತಷ್ಟು ಪರಿಣತಿ ಪಡೆಯಲು ಗುರು ರೇವತಿ ನರಸಿಂಹನ್ ಬಳಿ ನೃತ್ಯಾಭ್ಯಾಸದಲ್ಲಿ ತೊಡಗಿದಳು.ವಸಂತಪುರದ ಡಿಎವಿ ಪಬ್ಲಿಕ್ ಪರೀಕ್ಷೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಐಶ್ವರ್ಯ, ಪ್ರಸ್ತುತ ವಿದುಷಿ ಸಾವಿತ್ರಿ ಭಟ್ ಬಳಿ ಕರ್ನಾಟಕ ಸಂಗೀತವನ್ನೂ ಕಲಿಯುತ್ತಿದ್ದಾಳೆ. ಮೇ ತಿಂಗಳಿನಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಏರ್ಪಡಿಸಿದ ಭರತನಾಟ್ಯ ಸಿನಿಯರ್ ಪರೀಕ್ಷೆಯಲ್ಲಿ ಬೆಂಗಳೂರು ಜಿಲ್ಲೆಗೆ 3ನೇಯವಳಾಗಿ ಉತ್ತೀರ್ಣಳಾಗಿದ್ದಾಳೆ.ವಳವುರ್ ರಾಮಯ್ಯ ಪಿಳ್ಳೈ ಅವರ ಪರಂಪರೆಯ ಗುರು ರೇವತಿ ನರಸಿಂಹನ್ ಚೆನ್ನೈನ ಗುರು ಕೌಸಲ್ಯ ಅವರ ಶಿಷ್ಯೆ. ಕರ್ನಾಟಕದ ಹಿರಿಯ ನೃತ್ಯ ಗುರುಗಳಲ್ಲಿ ಒಬ್ಬರೆಂದು ಹೆಸರು ಪಡೆದಿದ್ದು, 1977ರಲ್ಲಿ ನಾಟ್ಯನಿಕೇತನ ಶಾಲೆ ಸ್ಥಾಪಿಸಿ ತಮ್ಮ ಕಲೆ ಧಾರೆ ಎರೆದಿದ್ದಾರೆ. ನೃತ್ಯ ಸಂಯೋಜನೆ ಮತ್ತು ಅಭಿನಯಕ್ಕಾಗಿ ಖ್ಯಾತರಾಗಿರುವ ರೇವತಿ ಅವರ `ಶಿವಕಾಮಿ~ ತಂಡ ದೇಶಾದ್ಯಂತ ಹಲವು ಉತ್ಸವ, ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದೆ.ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ.  ಸಂಜೆ 6.15.ಪರಂಪರಾ ನೃತ್ಯದಲ್ಲಿ

ರಂಜಿನಿ ಕಲಾಕೇಂದ್ರ: ಶನಿವಾರ ಪರಂಪರಾ ನೃತ್ಯೋತ್ಸವದಲ್ಲಿ ಸುಧಾ ನಾಗರಾಜ್ (ಆರಾಧನಾ ಇನ್‌ಸ್ಟಿಟ್ಯೂಟ್ ಆಫ್ ಭರತನಾಟ್ಯಂ), ಡಾ. ರಕ್ಷಾ ಕಾರ್ತಿಕ್ (ನಟನಂ ಇನ್‌ಸ್ಟಿಟ್ಯೂಟ್ ಆಫ್ ಡಾನ್ಸ್), ಸುಮನಾ ರಂಜಾಳಕರ್ (ಸಂಕರ್ಷಣ್ ಅಕಾಡೆಮಿ) ಮತ್ತು ಬಿ. ಎನ್. ಅನಂತ್ (ನೃತ್ಯಾಂಜಲಿ ಕಲಾ ನಿಕೇತನ) ಅವರಿಂದ ಭರತನಾಟ್ಯ.

ಸ್ಥಳ: ವಿದ್ಯಾರಣ್ಯ ಭವನ, ಗ್ರಂಥಾಲಯ ಸಭಾಂಗಣ, ಆರ್.ಪಿ.ಸಿ. ಬಡಾವಣೆ ಬಸ್ ನಿಲ್ದಾಣದ ಹಿಂದೆ. ವಿಜಯನಗರ.  ಸಂಜೆ 6.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry