ಭರತನಾಟ್ಯ ರಂಗಪ್ರವೇಶ

7

ಭರತನಾಟ್ಯ ರಂಗಪ್ರವೇಶ

Published:
Updated:

ಸುನಯನಾ ಜಿ.

ನಾಟ್ಯಾಂತರಂಗ: ಭಾನುವಾರ ಶುಭಾ ಧನಂಜಯ ಅವರ ಶಿಷ್ಯೆ ಸುನಯನಾ ಜಿ. ರಂಗಪ್ರವೇಶ (ನಟುವಾಂಗ: ಶುಭಾ ಧನಂಜಯ. ಸಂಗೀತ: ಇಂದಿರಾ ಶಂಕರ್. ಮೃದಂಗ: ಹರಿ. ಕೊಳಲು: ವಿವೇಕ ರಾಜ್. ವಯಲಿನ್: ಡಾ. ನಟರಾಜ ಮೂರ್ತಿ. ರಿದಂ ಪ್ಯಾಡ್: ಕಾರ್ತಿಕ್ ದಾತಾರ್).ಐದು ವರ್ಷದ ಬಾಲಕಿಯಾಗಿದ್ದಾಗಲೇ ನಾಟ್ಯಾಂತರಂಗದ ಶುಭಾ ಧನಂಜಯ ಅವರ ಬಳಿ ನೃತ್ಯಾಭ್ಯಾಸ ಮಾಡಲಾರಂಭಿಸಿದ ಸುನಯನಾ ಈಗ ಭರತನಾಟ್ಯ ಪ್ರಕಾರದಲ್ಲಿ ಪ್ರಬುದ್ಧತೆ, ಹಿಡಿತ ಸಾಧಿಸಿದ್ದಾಳೆ. ಮೈಸೂರು ದಸರಾ, ವಿಶ್ವ ಕನ್ನಡ ಸಮ್ಮೇಳನ ಸೇರಿದಂತೆ ಹಲವು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾಳೆ. ಒಂಬತ್ತು ವರ್ಷ ಸತತವಾಗಿ ನೃತ್ಯಾಭ್ಯಾಸ ಮಾಡಿರುವ ಆಕೆಯ ಶ್ರದ್ಧೆ, ನೃತ್ಯದ ಮೇಲಿನ ಪ್ರೀತಿ ಆಕೆ ನೀಡುವ ಪ್ರದರ್ಶನಗಳಲ್ಲಿ ವ್ಯಕ್ತವಾಗುತ್ತದೆ. ಬಸವೇಶ್ವರನಗರದ ಸೇಂಟ್ ಮೀರಾ ಹೈಸ್ಕೂಲ್‌ನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದು, ನೃತ್ಯವಲ್ಲದೇ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಶಿಕ್ಷಕರ ಪ್ರೀತಿಗೆ ಪಾತ್ರವಾಗಿದ್ದಾಳೆ. ಸಮಾಜಸೇವೆಯಲ್ಲೂ ಆಸಕ್ತಿ ಹೊಂದಿರುವ ಆಕೆ ಸ್ಮೈಲ್ ಫೌಂಡೇಶನ್, ಕ್ಯಾನ್ಸರ್ ಏಡ್ ಸೊಸೈಟಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾಳೆ.ಸುನಯನಾಳ ಗುರು ಶುಭಾ ಧನಂಜಯ ಬಹುಮುಖ ಪ್ರತಿಭೆಯ ಕಲಾವಿದೆ. ನೃತ್ಯ ಶಿಕ್ಷಕಿಯಾಗಿ, ಸಂಯೋಜಕಿಯಾಗಿ, ಸಂಘಟಕಿಯಾಗಿ ಹೆಸರು ಮಾಡಿದ್ದಾರೆ. ಮಧುರೆಯ ಎಸ್.ವಿ. ಶ್ರೀನಿವಾಸ ಅವರ ಶಿಷ್ಯೆ. ತಂಜಾವೂರು ಶೈಲಿಯ ನಾಟ್ಯ ಪರಂಪರೆಗೆ ಸೇರಿದವರು. ಮಾಯಾರಾವ್ ಬಳಿ ಕಥಕ್ ಮತ್ತು ನೃತ್ಯಸಂಯೋಜನೆಯಲ್ಲೂ ತರಬೇತಿ ಪಡೆದಿದ್ದಾರೆ.ಅತಿಥಿಗಳು: ಡಾ. ಸಂದೀಪ್ ಶಾಸ್ತ್ರಿ, ಎನ್. ಎಲ್. ನರೇಂದ್ರ ಬಾಬು, ಬಿ.ಪಿ. ಮುನಿರಾಜು 

ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಬೆಳಿಗ್ಗೆ 10.30ನವ್ಯ

ನಾಟ್ಯಲಹರಿ: ಭಾನುವಾರ ಗುರು ಮಮತಾ ಕಾರಂತ ಅವರ ಶಿಷ್ಯೆ ನವ್ಯ ಭರತನಾಟ್ಯ

ರಂಗಪ್ರವೇಶ.ಐದು ವರ್ಷದ ಬಾಲಕಿಯಾಗಿದ್ದಾಗ ಸ್ವತಃ ನೃತ್ಯ ಕಲಾವಿದೆಯಾಗಿರುವ ತಾಯಿ ರೂಪಾ ರಾಣಿ ಅವರಿಂದಾಗಿ ನೃತ್ಯದಲ್ಲಿ ಪುಟ್ಟ ಹೆಜ್ಜೆ ಇಟ್ಟ ನವ್ಯ, ಏಳು ವರ್ಷದವಳಿದ್ದಾಗ `ನಾಟ್ಯಲಹರಿ~ಗೆ ಸೇರ್ಪಡೆಗೊಂಡಳು. ನಂತರ ಗುರು ಮಮತಾ ಕಾರಂತ ಅವರ ಮಾರ್ಗದರ್ಶನದಲ್ಲಿ ಪಳಗಿದಳು. ಭರತನಾಟ್ಯದಲ್ಲಿ ಜ್ಯೂನಿಯರ್ ಮತ್ತು ಸಿನಿಯರ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಾಳೆ.ಕೋಲ್ಕತ್ತದ ರವೀಂದ್ರ ಭಾರತಿ ವಿವಿಗೆ ಸೇರಿದ ಬಾಂಗಿಯಾ ಸಂಗೀತ ಪರಿಷತ್ ಏರ್ಪಡಿಸುವ ಭರತನಾಟ್ಯ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾಳೆ. ಸಮಧುರ ಕಂಠವನ್ನು ಹೊಂದಿರುವ ನವ್ಯ ಕರ್ನಾಟಕ ಸಂಗೀತವನ್ನೂ ಕಲಿಯುತ್ತಿದ್ದಾಳೆ. ಪ್ರಸ್ತುತ ಸಿಎಂಆರ್ ನ್ಯಾಷನಲ್ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದಾಳೆ.ಅತಿಥಿಗಳು: ಮನು ಬಳಿಗಾರ್, ವಿದುಷಿ ಶೀಲಾ ಚಂದ್ರಶೇಖರ್

 ಸ್ಥಳ: ನಿಮ್ಹಾನ್ಸ್ ಸಮಾವೇಶ ಸಭಾಂಗಣ, ಹೊಸೂರು ರಸ್ತೆ. ಸಂಜೆ 6.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry