ಭರತನಾಟ್ಯ ರಂಗಪ್ರವೇಶ

7

ಭರತನಾಟ್ಯ ರಂಗಪ್ರವೇಶ

Published:
Updated:

ಪುಷ್ಪಾಂಜಲಿ ನಾಟ್ಯಕಲಾ ಅಕಾಡೆಮಿ: ಕನ್ನಡ ಭವನ, ಜೆ.ಸಿ ರಸ್ತೆ. ಕೋಲಾರ ರಮೇಶ್ ಅವರ ಶಿಷ್ಯೆಯರಾದ ಸುಷ್ಮಾ ಎಂ.ಎನ್ ಹಾಗೂ ಭವಾನಿ ಪಿ. ದಡ್ಡೂರ ಅವರ ರಂಗಪ್ರವೇಶ. ಉದ್ಘಾಟನೆ- ಸಾಹಿತಿ ಡಿ.ಎಸ್. ವೀರಯ್ಯ, ಅಧ್ಯಕ್ಷತೆ- ಪಾಲಿಕೆ ಸದಸ್ಯೆ ಪೂರ್ಣಿಮಾ ಶ್ರೀನಿವಾಸ್. ಸಂಜೆ 5.ಏಕ್ತಾನಗರದ ಎಸ್‌ಇಎ ಶಾಲೆಯಲ್ಲಿ ಭರತನಾಟ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಸುಷ್ಮಾ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಕಾರ್ಯಕ್ರಮ ನೀಡಿದ್ದಾರೆ. ತಾಯಿ ಬಚ್ಚಮ್ಮ ಹಾಗೂ ತಂದೆ ನಾಗರಾಜ್ ಅವರ ಪ್ರೋತ್ಸಾಹವೇ ಎಲ್ಲಾ ಯಶಸ್ಸಿಗೂ ಕಾರಣವಂತೆ.ಕೆ.ಆರ್ ಪುರಂನ ವೆಂಕಟೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿರುವ ಭವಾನಿ ಕಳೆದ ನಾಲ್ಕು ವರ್ಷಗಳಿಂದ ಭರತನಾಟ್ಯ ಅಭ್ಯಾಸ ನಡೆಸುತ್ತಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಸಾಯಿಕೀರ್ತಿ ಅವರ ಬಳಿ ಕಲಿಯುತ್ತಿರುವ ಭವಾನಿ ಕ್ರೀಡೆಯಲ್ಲೂ ಆಸಕ್ತಿ ಹೊಂದಲು ತಂದೆ ಪ್ರಭಪ್ಪ ಹಾಗೂ ತಾಯಿ ಸಾವಿತ್ರಿಯವರ ಪ್ರೋತ್ಸಾಹವೂ ಇದೆ ಎನ್ನುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry