ಮಂಗಳವಾರ, ಜೂನ್ 22, 2021
27 °C

ಭರದಿಂದ ಸಾಗಿದೆ ರಸ್ತೆ ಕಾಮಗಾರಿ

ಪ್ರಜಾವಾಣಿ ವಾರ್ತೆ/ ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಮಡಿಕೇರಿ: ನಗರದ ಸುದರ್ಶನ ವೃತ್ತದಿಂದ ಜನರಲ್ ತಿಮ್ಮಯ್ಯ ವೃತ್ತದವರೆಗಿನ ಹಾಳಾಗಿ ಹೋಗಿದ್ದ ರಸ್ತೆಯನ್ನು ಅಭಿವೃದ್ಧಿಪಡಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ಕಾಮಗಾರಿಯನ್ನು ಆರಂಭಿಸಿದೆ. ಬಹುದಿನಗಳಿಂದ ಹಾಳಾಗಿ ಹೋಗಿದ್ದ ಈ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ನಗರದ ನಾಗರಿಕರು ಬೇಡಿಕೆ ಮಂಡಿಸುತ್ತಾ ಬಂದಿದ್ದು, ಅದೀಗ ಕೈಗೂಡಿದೆ. ಈ  ರಸ್ತೆ ಅಭಿವೃದ್ಧಿಗೊಂಡರೆ  ಕುಶಾಲನಗರ ಹಾಗೂ ಸಿದ್ದಾಪುರ ಮಾರ್ಗದ ಮೂಲಕ ತೆರಳುವ ವಾಹನಗಳ ಸಂಚಾರ ಸುಗಮವಾಗಲಿದೆ.ಸುಮಾರು 1.3 ಕಿ.ಮೀ ಉದ್ದ ಹಾಗೂ 11 ಮೀಟರ್ ಅಗಲದ ಈ ರಸ್ತೆಯು ನಿರ್ಮಾಣ ಗೊಂಡರೆ ವಾಹನ ಚಾಲಕರು ನೆಮ್ಮದಿ ಉಸಿರು ಬಿಡಬಹುದಾಗಿದೆ. ವಾಹನ ಸಂಚಾರ ಇನ್ನಷ್ಟು ಸುಗಮವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.ನಗರಕ್ಕೆ ಪ್ರತಿದಿನ ಪ್ರವಾಸಿಗರ ಸಾವಿರಾರು ವಾಹನಗಳು ಆಗಮಿಸುತ್ತವೆ. ಮುಖ್ಯವಾಗಿ ಶನಿವಾರ ಹಾಗೂ ಭಾನುವಾರ ಈ ಸಂಖ್ಯೆ ಇನ್ನೂ  ಹೆಚ್ಚಳವಾಗುತ್ತದೆ. ಮೈಸೂರಿನಿಂದ ಅತ್ಯುತ್ತಮ ರಸ್ತೆ ಇದ್ದು ಹಾಯಾಗಿ ಮಡಿಕೇರಿ ನಗರದ ಪ್ರವೇಶದ್ವಾರದವರೆಗೆ ಬರಬಹುದಾಗಿತ್ತು. ನಂತರದ ಈ ರಸ್ತೆಯಲ್ಲಿ ಬಿದ್ದ ಗುಂಡಿಗಳು ಪ್ರಯಾಣದ ಇಡೀ ಉತ್ಸಾಹವನ್ನು ನುಚ್ಚುನೂರು    ಮಾಡಿಬಿಡುವಂತಿದ್ದವು.ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದು ಇಲ್ಲಿನ ನಾಗರಿಕರಿಗಲ್ಲದೇ, ಪ್ರವಾಸಿಗರಿಗೆ, ವಾಹನ ಚಾಲಕರಿಗೆ ಸಂತೋಷ ಉಂಟು ಮಾಡುವುದರಲ್ಲಿ ಸಂಶಯವಿಲ್ಲ. ರಸ್ತೆ ಕಾಮಗಾರಿ ಗುಣಮಟ್ಟದ್ದಾ ಗಿರಲಿ, ಒಂದೆರಡು ಮಳೆ ಬಿದ್ದರೆ ಟಾರ್ ಮೇಲೇಳುವಂತಿರಬಾರದು ಎನ್ನುವುದಷ್ಟೇ ಎಲ್ಲರ ಹಾರೈಕೆಯಾಗಿದೆ.ಈ ರಸ್ತೆಯಲ್ಲಿ  ವಾಹನಗಳ ಸಂಚಾರದ ಒತ್ತಡ ಹೆಚ್ಚಿರುವ   ಕಾರಣದಿಂದ ಕಾಮಗಾರಿಯನ್ನು ಶೀಘ್ರವಾಗಿ  ಪೂರ್ಣಗೊಳಿಸಲು ಎಲ್ಲ ತಯಾರಿ ಮಾಡಿಕೊಂಡಿದ್ದೇವೆ ಎಂದು ಹೆಸರು ಹೇಳಲು ಇಚ್ಛಿಸದ  ಕೆಆರ್‌ಡಿಸಿಎಲ್‌ನ ಎಂಜಿನಿಯ ರೊಬ್ಬರು ಹೇಳಿದರು.ಈಗ ಯೋಜನೆ ಹಾಕಿಕೊಂಡಂತೆ, ಮಳೆ ಮತ್ತೊಂದು ಅವಘಡ  ಸಂಭವಿಸದಿದ್ದರೆ ಕಾಮಗಾರಿಯು  ಇದೇ ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಏಪ್ರಿಲ್‌ನಿಂದ ವಾಹನಗಳ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.