ಭಾನುವಾರ, ಮೇ 16, 2021
23 °C

ಭರವಸೆಯ ಜುಡೊ ಸಂಗೀತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಎಲ್ಲಿಯ ಬೋಗಾರಹಳ್ಳಿ,  ಎಲಿಯ್ಲ ಲೆಬನಾನ್... ಇದು ಹಳ್ಳಿ ಹುಡುಗಿಯ ತಿರುಗಾಟ. ಪ್ರತಿಭೆ ಗರಿಗೆದರಲು ಅವಕಾಶ ಸಿಕ್ಕ ಫಲವಾಗಿ ಬೋಗಾರಹಳ್ಳಿಯ ಬಾಲೆ ಪಟಿಯಾಲಾ, ಇಂದೋರ್, ಬ್ಯಾಂಕಾಕ್, ದಕ್ಷಿಣ ಆಫ್ರಿಕ, ಲೆಬನಾನ್ ಹೀಗೆ ಹತ್ತಾರು ಕಡೆ ಜುಡೊ ಆಟದಲ್ಲಿ ತನ್ನ ನಿಜಬಲ ತೋರಿಸಿದ ಪ್ರಕರಣ. ಹೀಗೆ ಸಾಧನೆ ಮಾಡಿದ ಬಾಲಕಿ, ಜುಡೊ ಪಟು ಬಿ.ಆರ್. ಸಂಗೀತಾ.`ಜುಡೊ~ ಜಪಾನ್ ಮೂಲದ ಕ್ರೀಡೆ. ಜಪಾನ್‌ನಲ್ಲಿ ಸುಮಾರು 1886 ರಿಂದ ಜುಡೊ ಶಾಲೆಯಲ್ಲಿ ಕಲಿಕೆಯ ಒಂದು ಪಠ್ಯವಾಗಿದೆ. ಇಂದು ಜಗತ್ತಿನಾದ್ಯಂತ ಜುಡೊ ಹರಡಿದೆ. 1964ರಲ್ಲಿ ಪುರುಷರ ಜುಡೊ ಮತ್ತು 1992 ರಲ್ಲಿ ಮಹಿಳೆಯರ ಜುಡೊ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಗೊಂಡಿದೆ.ದೇಶದ ಸುಮಾರು 21 ಪಟ್ಟಣಗಳಲ್ಲಿ ಶಾಲೆಗಳಲ್ಲಿ ಜುಡೊ ಮತ್ತು ಕರಾಟೆಯ ಕೇಂದ್ರಗಳಿವೆ.ಹಾಸನದಿಂದ 12 ಕಿ.ಮೀ ದೂರದಲ್ಲಿರುವ ಪುಟ್ಟಹಳ್ಳಿ ಬೋಗಾರಹಳ್ಳಿ. ಇತರ ಹಳ್ಳಿಗಳಂತೆ ಇಲ್ಲೂ ಹಲವು ಕೊರತೆಳಿವೆ.  ಇಂಥ ಹಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆ ಬಿ.ಆರ್.ಸಂಗೀತಾ ಬೆಳಗಾವಿಯ  `ಫಿಯೋನಿಕ್ಸ್ ಪಬ್ಲಿಕ್ ಸ್ಕೂಲ್~ ಎಂಬ ಕ್ರೀಡಾ ವಸತಿ ಶಾಲೆಯ ವಿದ್ಯಾರ್ಥಿನಿ. ~ಏಷಿಯನ್ ಜುಡೊ ಯೂತ್ ಚಾಂಪಿಯನ್ ಶಿಪ್-2011~ ರಲ್ಲಿ ಲೆಬನಾನ್‌ನಲ್ಲಿ ನಡೆದಾಗ (63 ಕೆ.ಜಿ ವಿಭಾಗ) ಜುಡೊ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ಬಂದಿದ್ದಾಳೆ.ತನ್ನ ಹನ್ನೊಂದನೇ ವರ್ಷದಲ್ಲಿ ಕ್ರೀಡಾ ವಸತಿ ಶಾಲೆಗೆ ಪ್ರವೇಶ ಮಾಡಿದ ಸಂಗೀತಾ ಶಾಟ್‌ಪುಟ್ ಮೂಲಕ ಗುರುತಿಸಿಕೊಂಡಿದ್ದಳು. ಆನಂತರ ಆಕೆಯ ದೈಹಿಕ ಸಾಮರ್ಥ್ಯ, ಎತ್ತರ, ವಿಶಾಲವಾದ ಭುಜಬಲದಿಂದಾಗಿ ಜುಡೊ ಕ್ರೀಡೆಗೆ ಆಕರ್ಷಿತಳಾದಳು. 2010ರಲ್ಲಿ ಬೆಂಗಳೂರಿನಲ್ಲಿ ನಡೆದ ನ್ಯಾಷನಲ್ ಜುಡೊ ಜೂನಿಯರ್ ಚಾಂಪಿಯನ್ ಶಿಪ್‌ನಲ್ಲಿ  ಸ್ವರ್ಣ ಪದಕ ಮುಡಿಗೇರಿಸಿಕೊಂಡಿದ್ದಳು.ಆಕೆ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂಬುದು ಈಕೆಯ ಕೋಚ್ ತ್ರಿವೇಣಿ ಸಂಕಲಾ ಮತ್ತು ಜಿತೇಂದರ್ ಸಿಂಗ್ ಅವರ ಬಯಕೆ.ಮುಜುಗರದ ಮುದ್ದೆಯಂತಿರುವ, ಪಿಸುಮಾತಿನಲ್ಲಿಯೇ ಅಡಗಿ ಹೋಗುವ ಹೆಣ್ಣು ಕುಸ್ತಿ, ಜುಡೊ, ಕರಾಟೆಯಂತಹ ಕ್ರೀಡೆಗಳಲ್ಲೂ ಮಿಂಚಬಲ್ಲಳು ಎಂಬುದಕ್ಕೆ ಬೆಳಗಾವಿಯ ಕ್ರೀಡಾ ವಸತಿ ಶಾಲೆಯಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ನಮ್ಮೂರ ಹುಡುಗಿ ಬಿ.ಆರ್ ಸಂಗೀತಾ ಸಾಕ್ಷಿ. ಈಕೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂಬುದು ಎಲ್ಲರ ಹಾರೈಕೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.