ಭರವಸೆ ಹುಸಿಗೊಳಿಸಿದ ಸರ್ಕಾರ: ಅಸಮಾಧಾನ

7
ಅನಿಲದರ ಹೆಚ್ಚಳ ವಿರೋಧಿಸಿ ಪ್ರತಿಭಟನೆ

ಭರವಸೆ ಹುಸಿಗೊಳಿಸಿದ ಸರ್ಕಾರ: ಅಸಮಾಧಾನ

Published:
Updated:

ಆನೇಕಲ್‌: ‘ನಿರಂತರ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಭರವಸೆಗಳನ್ನು ಕಾಂಗ್ರೆಸ್‌ ಸರ್ಕಾರ ಹುಸಿಗೊಳಿಸುತ್ತಿದೆ’ ಎಂದು ಮಾಜಿ ಸಚಿವ ಡಾ.ಎ.ನಾರಾಯಣಸ್ವಾಮಿ ಅಸ ಮಾಧಾನ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಆಯೋಜಿಸಿದ್ದ ಅನಿಲ ಸಿಲಿಂಡರ್‌ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.‘ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಅಡುಗೆ ಅನಿಲ ಕೇವಲ ` 220 ಯಿತ್ತು, ಬುಕ್‌್ ಮಾಡಿದ 24 ಗಂಟೆಗಳಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಸಿಲಿಂಡರ್ ಬರುತ್ತಿತ್ತು. ಆದರೆ ಈಗ ಸಿಲಿಂಡರ್‌ ಬೆಲೆ  ` 1,280 ಗಳಾಗಿದೆ. ಬುಕ್‌ ಮಾಡಿ 15ದಿನ ಕಳೆದರೂ ದೊರೆಯುತ್ತಿಲ್ಲ’ ಎಂದು ಟೀಕಿಸಿದರು.‘ಗ್ಯಾಸ್‌ ಸಿಲಿಂಡರ್‌ ಪಡೆಯಲು ಆಧಾರ್‌ ಕಾರ್ಡ್‌್ ಅನಗತ್ಯ ಎಂದು ಆದೇಶಿಸಿದ್ದರೂ ಕೇಂದ್ರ ಸರ್ಕಾರ ಮಾತ್ರ ತನ್ನ ಪಟ್ಟು ಬಿಡದೇ ಜನರನ್ನು ಹಿಂಸಿ ಸುತ್ತಿದೆ. ಕೋಟಿ ಗಟ್ಟಲೆ ಹಣ ಲೂಟಿ ಮಾಡು ಹುನ್ನಾರ ಮಾಡುತ್ತಿದ್ದಾರೆ’ ಎಂದು ಹೇಳಿದರು.‘ಕಾಂಗ್ರೆಸ್‌ ಅಧಿಕಾರಿಕ್ಕೆ ಬಂದ ಮೇಲೆ ಅಗತ್ಯ ದಿನಬಳಕೆ ಸಾಮಗ್ರಿಗಳ ಬೆಲೆ ಏರುತ್ತಿದೆ. ತೈಲ ಬೆಲೆಗಳು ಗಗನಕ್ಕೇರಿದೆ ಇದರ ಪರಿಣಾಮವನ್ನು ಯುಪಿಎ ಸರ್ಕಾರ ಲೋಕಸಭಾ ಚುನಾವಣೆ ಯಲ್ಲಿ ಕಾಣಬೇಕಾಗುತ್ತದೆ’ ಎಂದರು.ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ತೇಜಶ್ರೀ ನಟರಾಜ್‌ ಮಾತ ನಾಡಿ, ‘ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಇದು ಶ್ರೀಮಂತರ ಅರಿ ವಿಗೆ ಬಾರದಿದ್ದರೂ ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ಹೊರೆ ಯಾಗಿದೆ. ಜನರು ದುಡಿದ ಹಣವನ್ನೆಲ್ಲಾ ದಿನಬಳಕೆಯ ಸಾಮಗ್ರಿ ಗಳಿಗೆ ಹಾಕಿದರೆ ಜೀವನ ನಡೆಸುವುದು ಕಷ್ಟ’ ಎಂದು ಹೇಳಿದರು.ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಜಿ. ಆಂಜಿನಪ್ಪ, ಮಾಜಿ ಅಧ್ಯಕ್ಷ ಎನ್‌.ಬಸವ ರಾಜು, ಮಹಿಳಾ ಮೋರ್ಚಾ ಅಧ್ಯಕ್ಷೆ ಕಮಲ್ಲಮ್ಮ, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಪಿ.ರಾಜು, ಜಿಲ್ಲಾ ಪಂಚಾಯಿತಿ ಸದಸ್ಯ ಜೆ.ನಾರಾಯಣಪ್ಪ, ಎಪಿಎಂಸಿ ಸದಸ್ಯ ಬಿ.ನಾಗರಾಜು, ಓಂಕಾರ್‌, ಪುರಸಭಾ ಮಾಜಿ ಅಧ್ಯಕ್ಷರಾದ ಸತ್ಯೇಂದ್ರಕುಮಾರ್‌, ಪದ್ಮ ಮುನಿ ರಾಜು, ಸುಜಾತರಾಜಣ್ಣ, ಸದಸ್ಯ ರಾದ ಜಯ ಲಕ್ಷ್ಮೀಮುನಿರಾಜು, ಎಂ.ನಾರಾ ಯಣ ಸ್ವಾಮಿ, ಶೀನಿವಾಸ್‌, ರಾಜ ರತ್ನಂ, ನರಸಿಂಹರೆಡ್ಡಿ, ರಾಜಪ್ಪ, ಟೌನ್‌ ಬಿಜೆಪಿ ಅಧ್ಯಕ್ಷ ಶಿವರಾಮ್‌, ಮುಖಂಡ ರಾದ ಸಾ.ವ.ಪ್ರಕಾಶ್‌, ರಾಮಕೃಷ್ಣ, ಶ್ರೀನಿ ವಾಸ್‌, ಮಧು, ಅಮ್ಜದ್‌ಖಾನ್‌, ಶ್ರೀಕಾಂತ್‌, ಎಂ.ಆರ್‌.ಯಲ್ಲಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry