ಭರ್ಜರಿ ಮಳೆ: ಇಳೆ ತಂಪು

7

ಭರ್ಜರಿ ಮಳೆ: ಇಳೆ ತಂಪು

Published:
Updated:
ಭರ್ಜರಿ ಮಳೆ: ಇಳೆ ತಂಪು

ಬೆಳಗಾವಿ: ಕಳೆದ ಕೆಲ ದಿನಗಳಿಂದ ಮೋಡದ ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಬೆಳಗಾವಿಯ ಜನತೆ ಬುಧವಾರ ಸಂಜೆಯ ಹೊತ್ತಿಗೆ ಹಿತವಾದ ಅನುಭವ ಪಡೆದರು. ಸಂಜೆ 5ರ ಸುಮಾರಿಗೆ ಆರಂಭವಾದ ಮಳೆ ಒಂದೂವರೆ ಗಂಟೆಕಾಲ ಭರ್ಜರಿಯಾಗಿ ಸುರಿಯಿತು. ಧಗೆಯಿಂದ ಸುಡುತ್ತಿದ್ದ ಧರೆ ತಂಪಾಗಿ ಎಲ್ಲೆಡೆ ತಂಪನೆಯ ವಾತಾವರಣ ನಿರ್ಮಾಣವಾಗಿತ್ತು.ಮೂರು ದಿನಗಳ ಹಿಂದಷ್ಟೇ ಬೆಳಗಾವಿ ನಗರದಲ್ಲಿ ಈ ವರ್ಷದ ಬೇಸಿಗೆಯ ಮೊದಲ ಮಳೆಯಾಗಿತ್ತು. ಆದರೆ ಕೆಲವೇ ನಿಮಿಷಗಳ ಕಾಲ ಮಳೆ ಬಂದು ಹೋಗಿತ್ತು. ಆ ತುಂತುರು ಮಳೆಯಿಂದ ಭೂಮಿ ತಂಪಾಗಲೇ ಇಲ್ಲ. ಅಂದು ಬೆಳಗಾವಿಯ ಜನತೆಗೆ ಈ ವರ್ಷದ ಮೊದಲ ಮಳೆಯ ಅನುಭವ ಮಾತ್ರ ಆಗಿತ್ತು. ಆದರೆ ಬುಧವಾರ ಮಾತ್ರ ಮಳೆಯ ಅರ್ಭಟ ಜೋರಾಗಿತ್ತು. ಮಳೆಯೊಂದಿಗೆ ಸಾಕಷ್ಟು ಬಿರುಗಾಳಿಯೂ ಇತ್ತು. ಹೀಗಾಗಿ ಮಳೆನೀರು ಮನೆಯೊಳಗೂ ನುಗ್ಗಿತು. ಅಲ್ಲಲ್ಲಿ ಒಂದಿಷ್ಟು ಆಲಿಕಲ್ಲು ಬಿದ್ದ ಬಗ್ಗೆಯೂ ವರದಿಯಾಗಿದೆ.ಸಂತಸ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಬುಧವಾರ ಮಧ್ಯಾಹ್ನವಷ್ಟೇ ಮುಗಿದ ಕಾರಣಕ್ಕೆ ವಿದ್ಯಾರ್ಥಿಗಳು ಈ ಮಳೆಯನ್ನು ಹರ್ಷದಿಂದ ಸ್ವಾಗತಿಸಿದರು. ಅವರೆಲ್ಲ ಮಳೆಯಲ್ಲೇ ತೆರಳುತ್ತಿದ್ದ ದೃಶ್ಯಗಳೂ ಕಂಡು ಬಂದವು.ವಿದ್ಯುತ್ ಸ್ಥಗಿತ: ನಗರದಲ್ಲಿ ಸಿಡಿಲು ಮಳೆ ಜೋರಾಗುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಸರಬರಾಜು ನಿಲ್ಲಿಸಲಾಯಿತು. ಸಂಜೆಯ ಬಳಿಕವೂ ತುಂತುರು ಮಳೆ ಮುಂದುವರಿದಿತ್ತು. ಖಾನಾಪುರ ಭಾಗದಲ್ಲೂ ಉತ್ತಮ ಮಳೆಯಾದ ವರದಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry