ಮಂಗಳವಾರ, ಆಗಸ್ಟ್ 20, 2019
27 °C

ಭರ್ತಿಯಾದ ಮೆಟ್ಟೂರು ಜಲಾಶಯ

Published:
Updated:
ಭರ್ತಿಯಾದ ಮೆಟ್ಟೂರು ಜಲಾಶಯ

ಸೇಲಂ (ಪಿಟಿಐ): ತಮಿಳುನಾಡಿನಲ್ಲಿ ಕಾವೇರಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿರುವ ಮೆಟ್ಟೂರು ಜಲಾಶಯವು ಎಂಟು ವರ್ಷದ ನಂತರ ಭರ್ತಿಯಾಗಿದೆ.ಜಲಾಶಯದ ಗರಿಷ್ಠ ನೀರಿನ ಮಟ್ಟ 120 ಅಡಿ ಆಗಿದ್ದು, ಭಾನುವಾರ ರಾತ್ರಿ  ನೀರಿನ ಮಟ್ಟ 121 ಅಡಿ ದಾಟಿತು ಎಂದು ಲೋಕೋಪಯೋಗಿ ಇಲಾಖೆ ಮೂಲಗಳು ತಿಳಿಸಿವೆ.ಕರ್ನಾಟಕದಲ್ಲಿ ಭಾರಿ ಮಳೆ ಕಾರಣ, ಕೃಷ್ಣರಾಜ ಸಾಗರ ಅಣೆಕಟ್ಟೆಯಿಂದ ಇತ್ತೀಚೆಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಿದ್ದರಿಂದ, ಮೆಟ್ಟೂರು ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದು ಭರ್ತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Post Comments (+)