ಭರ್ತಿಯಾದ ಲಿಂಗನಮಕ್ಕಿ: ನೀರು ಹೊರಕ್ಕೆ

7

ಭರ್ತಿಯಾದ ಲಿಂಗನಮಕ್ಕಿ: ನೀರು ಹೊರಕ್ಕೆ

Published:
Updated:

ಕಾರ್ಗಲ್: ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಲಿಂಗನಮಕ್ಕಿ ಜಲಾಶಯ ಗರಿಷ್ಠ ಮಟ್ಟ ತಲುಪಿದ್ದು, ಒಳಹರಿವು ಹೆಚ್ಚುತ್ತಿರುವ ಕಾರಣ ಬುಧ­ವಾರ 10 ಸಾವಿರ ಕ್ಯೂಸೆಕ್ ನೀರನ್ನು 5 ಕ್ರೆಸ್ಟ್ ಗೇಟ್‌ಗಳ ಮೂಲಕ ಹೊರ ಬಿಡಲಾಗಿದೆ.ತೀರ್ಥಹಳ್ಳಿ, ಹೊಸನಗರ, ಮಾಸ್ತಿ ಕಟ್ಟೆ, ತುಮರಿ, ಬ್ಯಾಕೋಡು ಭಾಗ­ಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾ­ಶಯಕ್ಕೆ ಹೆಚ್ಚು ನೀರು ಹರಿದು ಬರುತ್ತಿದೆ. ನದಿ ತೀರದ ನಿವಾಸಿ­ಗಳಿಗೆ ಈಗಾಗಲೇ ಜಾಗೃತರಾಗಿ­ರುವಂತೆ ಎಚ್ಚರಿಕೆಯ ಸಂದೇಶ ಕಳುಹಿಸ­ಲಾಗಿದೆ.ಕೆಪಿಸಿಯ ಉನ್ನತ ಅಧಿಕಾರಿ­ಗಳು, ಭದ್ರತಾ ವಿಭಾ­ಗದ ಪ್ರತ್ಯೇಕ ತಂಡಗಳನ್ನು ನದಿ ತೀರದ ನಿವಾಸಿಗಳ ಸುರಕ್ಷತೆಗಾಗಿ ನಿಯೋಜನೆ ಮಾಡ­ಲಾಗಿದೆ ಎಂದು ಕೆಪಿಸಿ ಮುಖ್ಯ ಎಂಜಿನಿಯರ್ ರಾಜಮುಡಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry