ಶುಕ್ರವಾರ, ನವೆಂಬರ್ 22, 2019
20 °C
ಪಿಕ್ಚರ್ ಪ್ಯಾಲೆಸ್

ಭಲೇ ಬಾಣಸಿಗ!

Published:
Updated:

ಮಕ್ಕಳಿಗೂ ಅಡುಗೆಮನೆಗೂ ಸಂಬಂಧವೇನೋ ಇರುತ್ತದೆ. ತಮ್ಮ ಜಿಹ್ವಾಚಾಪಲ್ಯ ತಣಿಸಿಕೊಳ್ಳಲು `ಅದು ಮಾಡಮ್ಮಾ... ಇದು ಮಾಡಮ್ಮಾ' ಎಂದು ಅಂಗಲಾಚುವುದು ಮಕ್ಕಳ ಸಹಜ ಸ್ವಭಾವ. ಆದರೆ ಅದೇ ಮಕ್ಕಳು ಖುದ್ದು ಅಡುಗೆ ಮಾಡಲು ನಿಂತರೆ? ಪುಟಾಣಿಗಳು ಆಟಿಕೆಗಳನ್ನು ಉಪಯೋಗಿಸಿ ಅಡುಗೆ ಆಟವಾಡುವುದು ಇದ್ದೇಇದೆ. ಅದನ್ನು ನಿಜವಾದ ಆಟವಾಗಿಸಿದ್ದು `ಬೆಂಗಳೂರು ನೈಟ್ಸ್ ಲೇಡೀಸ್ ಸರ್ಕಲ್ 107'. ಇತ್ತೀಚೆಗೆ ಸಂಸ್ಥೆಯು `ಲಿಟ್ಲ್ ಮಾಸ್ಟರ್ ಶೆಫ್' (ಭಲೇ ಪುಟಾಣಿ ಬಾಣಸಿಗ) ಸ್ಪರ್ಧೆಯೊಂದನ್ನು ಬೆಂಗಳೂರು ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ಆಯೋಜಿಸಿತ್ತು.`ಮಿಸ್ ಅರ್ತ್ 2010' ಕಿರೀಟ ತೊಟ್ಟಿದ್ದ ನಿಕೋಲ್ ಫರಿಯಾ ಹಾಗೂ `ಸಾಫ್ಟ್ ಸ್ಕಿಲ್' ತರಬೇತುದಾರ ಇಯಾನ್ ಫರಿಯಾ ಸ್ಪರ್ಧೆಗೆ ಸಾಕ್ಷಿಯಾದರು. ತಮಗೆ ತೋಚಿದ ತಿನಿಸು, ಪಾನೀಯಗಳನ್ನು ಸಿದ್ಧಪಡಿಸಿ ಮಕ್ಕಳು ಖುಷಿಪಟ್ಟರು. ಅವುಗಳ ರುಚಿ ಸವಿದ ಮಕ್ಕಳ ಮುಖಗಳೂ ಅರಳಿದವು. ಬಹುಮಾನ ಪಡೆದ ಮಕ್ಕಳಂತೂ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಿದ್ದರು. 

ಪ್ರತಿಕ್ರಿಯಿಸಿ (+)