ಭಲೇ ಬಿಲ್ಲುಗಾತಿ!

7

ಭಲೇ ಬಿಲ್ಲುಗಾತಿ!

Published:
Updated:

ಎರಡೂ ಕೈಗಳಿಂದ ಬಾಣ ಪ್ರಯೋಗ ಮಾಡಲು ಸಮರ್ಥನಾದ ಕಾರಣ ಸವ್ಯಸಾಚಿ ಎಂಬ ಬಿರುದು ಪಡೆದ ಅರ್ಜುನನಿಗೂ ಇಂಥ ಕರಾಮತ್ತು ಗೊತ್ತಿರಲಿಲ್ಲವೇನೋ! ಬಳ್ಳಿ ದೇಹವನ್ನು ಚೇಳಿನಂತೆ ಬಾಗಿಸಿ ಎತ್ತಿದ ಕಾಲುಗಳಲ್ಲಿ ಬಿಲ್ಲು ಹಿಡಿದು ಇಪ್ಪತ್ತು ಅಡಿ ದೂರದಲ್ಲಿರುವ ಫಲಕವನ್ನು ಚುಚ್ಚಿ ನುಚ್ಚುನೂರು ಮಾಡಿದ್ದಾರೆ 26 ವರ್ಷದ ಈ ಸಾಹಸಿ ಕ್ಯಾಲಿಫೋರ್ನಿಯಾದ ನ್ಯಾನ್ಸಿ ಸಿಫಿಕರ್. ಐದೂವರೆ ಇಂಚು ವ್ಯಾಸವಿರುವ ಗುರಿಯ ಮೇಲೆ ಪ್ರಯೋಗಿಸಿದ ಬಾಣ ನಿಶ್ಚಿತವಾದ ಗುರಿಯನ್ನು ಮುಟ್ಟಿದೆ. ಲಾಸ್ ಏಂಜೆಲೀಸ್‌ನಲ್ಲಿ ನಡೆಸಿದ ಪ್ರಯೋಗ 2015ರ ಗಿನ್ನಿಸ್ ದಾಖಲೆಯ ಪುಸ್ತಕವನ್ನು ಸೇರಿದೆ. ‘ಬಿಲ್ವಿದ್ಯೆಗೆ ರಾಬಿನ್‌ಹುಡ್ ಪ್ರೇರಣೆ, ಆತನೇ ನನ್ನ ಮಾನಸಿಕ ಗುರು’ ಎಂದಿರುವ ನ್ಯಾನ್ಸಿ, ಸರ್ಕಸ್ ಕಂಪೆನಿಯ ಕಲಾವಿದೆಯೂ ಹೌದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry