ಭವಿಷ್ಯದ ಕನಸಿನ ಅನಾವರಣ

7

ಭವಿಷ್ಯದ ಕನಸಿನ ಅನಾವರಣ

Published:
Updated:
ಭವಿಷ್ಯದ ಕನಸಿನ ಅನಾವರಣ

ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿರುವ ಸಿಎಂಆರ್ ನ್ಯಾಷನಲ್ ಪಿಯು ಕಾಲೇಜು ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ `ನೋವಮ್ 2012~ ಕಾರ್ಯಕ್ರಮ ಜ್ಞಾನ ವಿನಿಮಯಕ್ಕೆ ಅವಕಾಶ ಕಲ್ಪಿಸಿಕೊಟ್ಟಿತು.  ಈ ಕಾರ್ಯಕ್ರಮ ಯುವ ಪ್ರತಿಭೆಗಳ ಕ್ರಿಯಾಶೀಲತೆ ಹಾಗೂ ಹೊಸ ಅವಿಷ್ಕಾರಗಳ ಅನಾವರಣಕ್ಕೆ ಸಾಕ್ಷಿಯಾಯಿತು. ವಿಜ್ಞಾನ ಹಾಗೂ ವಾಣಿಜ್ಯ ವಿಷಯಕ್ಕೆ ಸಂಬಂಧಪಟ್ಟ ಭವಿಷ್ಯದ ಕನಸುಗಳ ಸುಮಾರು 25 ಮಾದರಿಯನ್ನು ವಿದ್ಯಾರ್ಥಿಗಳು ಇಲ್ಲಿ ಪ್ರದರ್ಶಿಸಿದರು.

 

ಈ ಪ್ರತಿಭೆಗಳ ಕನಸುಗಳ ಅನಾವರಣಕ್ಕೆ ಕಳಶಪ್ರಾಯ ಎಂಬಂತೆ ತೀರ್ಪುಗಾರರು ವಿದ್ಯಾರ್ಥಿಗಳ ಪ್ರಾಯೋಗಿಕ ಹಾಗೂ ಸ್ನೇಹಪರ ಪ್ರತಿಭೆಯನ್ನು ಮೆಚ್ಚಿ ವಿಜೇತರಿಗೆ ಬಹುಮಾನ ನೀಡಿ ಪುರಸ್ಕರಿಸಿ ಬೆನ್ನುತಟ್ಟಿದರು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿಜ್ಞಾನಿಗಳು ಪಾಲ್ಗೊಂಡಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry