ಮಂಗಳವಾರ, ಅಕ್ಟೋಬರ್ 15, 2019
29 °C

ಭವಿಷ್ಯ ನಿಧಿ: ಶೇ 8.6 ಬಡ್ಡಿ ದರ ನಿಗದಿ?

Published:
Updated:

ನವದೆಹಲಿ (ಪಿಟಿಐ): ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) 2011-12ನೇ ಸಾಲಿನಲ್ಲಿ ಸಂಘಟನೆಯ ಸದಸ್ಯರ ಠೇವಣಿಗಳಿಗೆ ಶೇ 8.6ರಷ್ಟು ಬಡ್ಡಿ ದರ ನಿಗದಿ ಮಾಡುವ ಸಾಧ್ಯತೆಗಳಿವೆ.

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆಗೆ ನಿಗದಿ ಮಾಡಿರುವ ಬಡ್ಡಿ ದರವನ್ನೇ (ಶೇ 8.6ರಷ್ಟು), ಭವಿಷ್ಯ  ನಿಧಿ (ಪಿಎಫ್) ಠೇವಣಿಗೂ ನಿಗದಿ ಮಾಡಲು ಕಾರ್ಮಿಕ ಸಚಿವಾಲಯವು  ಹಣಕಾಸು ಇಲಾಖೆಗೆ  ಶೀಘ್ರದಲ್ಲಿಯೇ ಟಿಪ್ಪಣಿ ಕಳಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.`ಇಪಿಎಫ್‌ಒ~ ಬಡ್ಡಿ ದರಗಳು `ಪಿಪಿಪಿ~ ದರದಷ್ಟೇ ಇರಬೇಕೆಂದು ಕಾರ್ಮಿಕ ಸಚಿವಾಲಯವು ನಿಲುವು ತಳೆದಿದೆ.

`ಇಪಿಎಫ್‌ಒ~ನಲ್ಲಿ ಸಕ್ರಿಯವಾಗಿಲ್ಲದ ಖಾತೆಗಳಲ್ಲಿ ರೂ. 15 ಸಾವಿರ ಕೋಟಿಗಳಷ್ಟು ಹಣ ಇದೆ. ಈ ಮೊತ್ತವನ್ನು ಬೇರೆಡೆ ಹೂಡಿಕೆ ಮಾಡಿ ಲಾಭ ಪಡೆಯಲಾಗುತ್ತಿದೆ. ಆದರೆ, ಈ ಹೂಡಿಕೆಯಿಂದ ಬರುವ ಲಾಭವನ್ನು ಸಕ್ರಿಯವಾಗಿರುವ ಖಾತೆಗಳಿಗೆ ಹಂಚಿಕೆ ಮಾಡುವ ಬಗ್ಗೆ ಇದುವರೆಗೆ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ. 36 ತಿಂಗಳುಗಳಿಗಿಂತ ಹೆಚ್ಚಿನ ಅವಧಿಗೆ ಸದಸ್ಯರಿಂದ ಯಾವುದೇ ಕೊಡುಗೆ ಸ್ವೀಕರಿಸದ ಪ್ರಕರಣಗಳನ್ನು   ಸಕ್ರಿಯವಾಗಿಲ್ಲದ ಖಾತೆಗಳೆಂದು ಪರಿಗಣಿಸಲಾಗುತ್ತಿದೆ.

Post Comments (+)