ಶನಿವಾರ, ನವೆಂಬರ್ 23, 2019
17 °C

ಭವಿಷ್ಯ ನುಡಿದಿದ್ದ ಚಂದ್ರಸ್ವಾಮಿ

Published:
Updated:

ಲಂಡನ್ (ಐಎಎನ್‌ಎಸ್): ಮಾರ್ಗರೇಟ್ ಥ್ಯಾಚರ್ ವಿರೋಧ ಪಕ್ಷದ ನಾಯಕಿಯಾಗಿದ್ದ ಸಂದರ್ಭದಲ್ಲಿ ಭಾರತ ಮೂಲದ ಸ್ವಯಂ ಘೋಷಿತ ದೇವಮಾನವ ಚಂದ್ರಸ್ವಾಮಿ, ಥ್ಯಾಚರ್ ಅವರು ಬ್ರಿಟನ್ನಿನ ಪ್ರಧಾನಿಯಾಗುತ್ತಾರೆಂದು ಭವಿಷ್ಯ ನುಡಿದಿದ್ದರು ಎನ್ನಲಾಗಿದೆ.ಥ್ಯಾಚರ್ ಅವರು 1975ರಲ್ಲಿ ವಿರೋಧ ಪಕ್ಷದ ನಾಯಕಿಯಾಗಿದ್ದಾಗ ಚಂದ್ರಸ್ವಾಮಿ ಅವರನ್ನು ರಹಸ್ಯವಾಗಿ ತಮ್ಮ ಕಚೇರಿಯಲ್ಲಿ ಭೇಟಿಯಾಗಿದ್ದರು. ಆಗ ಚಂದ್ರಸ್ವಾಮಿ, ಥ್ಯಾಚರ್ ಅವರು ಇನ್ನು ನಾಲ್ಕು ವರ್ಷಗಳಲ್ಲಿ ಬ್ರಿಟನ್ನಿನ ಪ್ರಧಾನಿಯಾಗುತ್ತಾರೆಂದೂ, ಒಂದು ದಶಕಕ್ಕೂ ಹೆಚ್ಚು ಕಾಲ ಅವರು ಅಧಿಕಾರದಲ್ಲಿರುತ್ತಾರೆಂದೂ ಹೇಳಿದ್ದರು ಎಂದು `ಡೈಲಿ ಮೇಲ್' ವರದಿ ಮಾಡಿದೆ.

ಪ್ರತಿಕ್ರಿಯಿಸಿ (+)