ಬುಧವಾರ, ಏಪ್ರಿಲ್ 14, 2021
32 °C

ಭವಿಷ್ಯ ನುಡಿಯುವ ಪಾತಲಿಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಿಷ್ಟ ಸಂಪ್ರದಾಯ ಹಾಗೂ ಆಚರಣೆಯಿಂದ ಕೂಡಿರುವ, ಬೆಳಕಿಗೆ ಬಾರದ ದೇವಾಲಯಗಳ ಸಾಲಿನಲ್ಲಿ  ದೊಡ್ಡಬಾದಿಹಳ್ಳಿ ಪಾತಲಿಂಗೇಶ್ವರ ಸ್ವಾಮಿ ದೇವಾಲಯ ಒಂದು. ಚಳ್ಳಕೆರೆ ತಾಲ್ಲೂಕು ಕೇಂದ್ರದಿಂದ ಸುಮಾರು 45 ಕಿ.ಮೀ ದೂರದ ಆಂಧ್ರಗಡಿಯಲ್ಲಿರುವ ದೊಡ್ಡಬಾದಿ ಹಳ್ಳಿ ಗ್ರಾಮದಲ್ಲಿ ಪಾತಲಿಂಗೇಶ್ವರ ಸ್ವಾಮಿ ದೇವಸ್ಥಾನ ವಿಶೇಷಗಳಿಂದ ಪ್ರಸಿದ್ಧಿ ಪಡೆದಿದೆ.ಇಲ್ಲಿರುವ ಲಿಂಗ ಸ್ವಯಂ ಉದ್ಭವಮೂರ್ತಿ ಆಗಿರುವುದರಿಂದ `ಪಾತ~ ಎಂಬ ಹೆಸರು ಬಂದಿದೆ. ಇದು, ಪುರಾತನ-ಲಿಂಗ, ಹಳೆಯ- ಲಿಂಗ, ಪಾತ- ಲಿಂಗ, ನಂತರ ಪಾತಲಿಂಗೇಶ್ವರ ಎಂದಾಗಿದೆ ಎಂದು ಹಿರಿಯರು ತಿಳಿಸುತ್ತಾರೆ.ಆಂಧ್ರದ ಅನಂತಪುರ ಜಿಲ್ಲೆಯ ಆಕನೂರು ಪಾತಪ್ಪ ಮತ್ತು ಈ ಹೆಸರಿನಲ್ಲಿ ಅಲ್ಲಲ್ಲಿ ಕಂಡುಬರುವ ದೇವರುಗಳಿಗ್ಲ್ಲೆಲಾ ಮೂಲ ಪುರುಷನ ನೆಲೆ ದೊಡ್ಡಬಾದಿಹಳ್ಳಿಯಾಗಿದ್ದು, ನಿಡಗಲ್ಲು ದುರ್ಗದ ದೊರೆಗಳು ಭೇಟೆಗೆಂದು ಈ ಪ್ರಾಂತ್ಯಕ್ಕೆ ಬಂದಾಗ ಈತನಿಗೆ ಪೂಜಿಸುವ ಪದ್ಧತಿ ಇತ್ತೆಂದು ರಾಸುಗಳಿಗೆ ಬರುವ ಬಾದೆ ನಿವಾರಣೆ ಮಾಡಿದ್ದರ ಕುರುಹಾಗಿ ಈ ಗ್ರಾಮಕ್ಕೆ ದೊಡ್ಡಬಾದಿಹಳ್ಳಿ ಎಂದು ಕರೆಯುತ್ತಾರೆ.ಸುತ್ತಲಿನ ಗ್ರಾಮದಲ್ಲಿ ಬಾದಿಪಲ್ಲಯ್ಯ, ಬಂಗಾರ ಲಿಂಗಮಯ್ಯ, ಕರೇಬಜ್ಜುನ, ಪೋತಲ್‌ರಾಜ್, ಪಾತಪ್ಪ, ಪಾತಲಿಂಗ, ಮಾಲಿಂಗ ಎಂಬ ಹೆಸರಿನ ಜನರಿದ್ದಾರೆ, ಅಲ್ಲದೇ, ಇಲ್ಲಿಂದ ನಾಲ್ಕೈದು ಕಿಲೋ ಮೀಟರ್ ದೂರದಲ್ಲಿ ಪಾತಪ್ಪನ ಗುಡಿ ಎಂಬ ಹೆಸರಿನ ಊರಿದೆ ಎಂದು ದೊಡ್ಡಕಪ್ಲೆ ನಿಂಗಪ್ಪ ಹೇಳುತ್ತಾರೆ.ಈ ದೇವರು, ಈ ಭಾಗಕ್ಕೆ `ಕಾಲರ ಹಾಗೂ ದೊಡ್ಡರೋಗ~ ಹರಡುವ ಮುಂಜಾಗ್ರತೆ ತಿಳಿಸುವ ವಿಶೇಷತೆ ಹೊಂದಿದೆ. ಭೂತಗಳನ್ನು ಬಿಡಿಸುವ ಕಾರ್ಯ ಪ್ರತಿ ಭಾನುವಾರ ನಡೆಯುತ್ತದೆ. ಅನಾರೋಗ್ಯಕ್ಕೆ ತುತ್ತಾದವರು ಇಲ್ಲಿಗೆ ಬಂದು ಪೂಜಿಸುತ್ತಾರೆ. ಈ ಭಾಗದ ರೈತರು ಪ್ರತಿ ವರ್ಷದ ಮಳೆ-ಬೆಳೆಯ ಬಗ್ಗೆ  ಮಂಚಿತವಾಗಿಯೇ ತಿಳಿದು, ಬೆಳೆ ಬೆಳೆದರೆ, ಉತ್ತಮ ಫಸಲು ಪಡೆಯಬಹುದು ಎಂದು ತಿಳಿಯುತ್ತಾರೆ. ಅದರಂತೆ ನಡೆಯುತ್ತಾರೆ ಎಂದು ಪಾಳೇಗಾರರ ವಂಶಸ್ಥ ಪೂಜಾರಿ ನಿಂಗಪ್ಪ ತಿಳಿಸುತ್ತಾರೆ.ಪ್ರತಿ ವರ್ಷ ಯುಗಾದಿ ಹಬ್ಬದಲ್ಲಿ ವಿಶೇಷ ಆಚರಣೆ ಹಮ್ಮಿಕೊಳ್ಳುತ್ತಾರೆ, ಮೊದಲನೇ ಹಬ್ಬದಂದು ಪೂಜೆ ಮಾಡಲಾಗುತ್ತದೆ. 2ನೇ ದಿನ ಭಜನೆ, ಕೋಲಾಟದ ಸಂಭ್ರಮ, ಮೂರನೇ ದಿನ `ಗಾವು ಸಿಗಿಯುವ~ ಕಾರ್ಯಕ್ರಮ, ನಾಲ್ಕನೇ ದಿನ ಪ್ರಸಾದ ವಿನಿಯೋಗ ನಡೆಯುತ್ತದೆ. ರಾಯದುರ್ಗ,  ಕಲ್ಯಾಣದುರ್ಗ, ಅನಂತಪುರ, ಅಮರಾಪುರ, ಮಡಕಶಿರ, ಹಿರಿಯೂರು, ದಾವಣಗೆರೆಯಿಂದ ಭಕ್ತರು ಆಗಮಿಸುತ್ತಾರೆ. ಇಲ್ಲಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.