ಗುರುವಾರ , ಮೇ 6, 2021
21 °C

ಭವಿಷ್ಯ ರೂಪಿಸುವ ಶಿಕ್ಷಣ ಸಿಗುತ್ತಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಪ್ರಸ್ತುತ ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸುವ ಶಿಕ್ಷಣ ಸಿಗುತ್ತಿಲ್ಲ ಎಂದು ಪ್ರೊ. ಸಿ.ಎನ್. ರಾವ್ ಅಭಿಪ್ರಾಯಪಟ್ಟರು.ಕೃಷ್ಣಾನುಭವ ಪ್ರತಿಷ್ಠಾನವು ನಗರದ ಎಂ.ಎಸ್. ಪಾಟೀಲ್ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ `ಮನೆಗೊಂದು ಗೀತಾಮೃತ~ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಆಧುನಿಕ ಯುಗದಲ್ಲಿ ಮಕ್ಕಳಿಗೆ ಯಂತ್ರ ನಿರ್ವಹಿಸುವ ವಿದ್ಯೆ ಕಲಿಸಿಕೊಡಲಾಗುತ್ತಿದೆ. ಆದರೆ, ಬದುಕು ಹಸನಗೊಳಿಸುವ ವಿದ್ಯೆ ಸಿಗದಿರುವುದು ಕಳವಳದ ಸಂಗತಿ ಆಗಿದೆ ಎಂದರು.ವಿದ್ಯಾರ್ಥಿಗಳಿಗೆ ಶಾಲಾ ಕೋಣೆಯ ಜೊತೆಗೆ ಹೊರಗಿನ ಜ್ಞಾನವೂ ಜರೂರಿಯಾಗಿದೆ. ಇಲ್ಲದಿದ್ದರೆ ಅವಘಡಗಳನ್ನು ಎದುರಿಸುವ ಶಕ್ತಿ ಇರುವುದಿಲ್ಲ. ಸಣ್ಣ ಪುಟ್ಟ ಅನಾಹುತಗಳಿಂದ ಜಿಗುಪ್ಸೆಗೊಂಡು ಆತ್ಮಹತ್ಯೆ ಕಾರಣ ಆಗುತ್ತದೆ ಎಂದು ತಿಳಿಸಿದರು.ಸನ್ಮಾರ್ಗದ ಕಡೆಗೆ ಕರೆದೊಯ್ಯುವ ರಾಮಾಯಣ, ಮಹಾಭಾರತ, ಭಗವದ್ಗೀತೆಗಳ ಅರಿವು ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ ಎಂದು ಹೇಳಿದರು.ಶರಣರು, ಸಂತರು ರಚಿಸಿರುವ ಸಾಹಿತ್ಯ ಅಮೂಲ್ಯವಾಗಿದೆ ಎಂದು ಸಾನ್ನಿಧ್ಯ ವಹಿಸಿದ್ದ ಬಸವಮುಕ್ತಿ ಮಂದಿರದ ಶಿವಯೋಗೀಶ್ವರ ಸ್ವಾಮೀಜಿ ನುಡಿದರು. ಪ್ರೊ. ವೆಂಕಣ್ಣ ಡೊಣ್ಣೆಗೌಡ ಉಪನ್ಯಾಸ ನೀಡಿದರು.ಪ್ರತಿಷ್ಠಾನದ ಅಧ್ಯಕ್ಷ ಓಂಪ್ರಕಾಶ ದಡ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.  ಪ್ರಿಯಾಂಕ ರಾಠೋಡ್, ಈಶ್ವರ ಪಾಂಚಾಳ್, ಮಾಣಿಕ ಪ್ರಭು, ಬಸವರಾಜ ಶೀಲವಂತ, ಶಿವಕುಮಾರ ಪಾಂಚಾಳ, ಕಾಶಿನಾಥ ಹೆಡಗಾಪುರ, ರಾಜಕುಮಾರ ವಿಶ್ವಕರ್ಮ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಪ್ರಮುಖರಾದ ದೇಶಾಂಶ ಹುಡಗಿ, ಪಂಚಾಕ್ಷರಿ ಪುಣ್ಯಶೆಟ್ಟಿ, ಶಿವರಾಜ ಗಂದಗೆ, ವಿಜಯಕುಮಾರ ಪಾಟೀಲ್ ಖಾಜಾಪುರ ಮತ್ತಿತರರು ಉಪಸ್ಥಿತರಿದ್ದರು. ಪ್ರೊ. ಶಂಕರರಾವ ರಾಠೋಡ್ ಸ್ವಾಗತಿಸಿದರು. ರಮೇಶ ಬಿರಾದಾರ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.