ಭವಿಷ್ಯ ಹೇಳುವ ಚಟ

7

ಭವಿಷ್ಯ ಹೇಳುವ ಚಟ

Published:
Updated:

ಕೋಡಿ ಮಠದ ಸ್ವಾಮೀಜಿ ಅವರು ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜತೆ ಮಾತನಾಡುತ್ತಾ ರಾಜ್ಯ ಸರ್ಕಾರಕ್ಕೆ ಮುಂದಿನ ತಿಂಗಳು ಕಂಟಕ ಕಾದಿದೆ. ಇದರಿಂದ ಪಾರಾದರೂ 11 ತಿಂಗಳು ಮಾತ್ರ  ಅಸ್ತಿತ್ವದಲ್ಲಿ ಇರಲಿದೆ. ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಗೊಂದಲ ಸ್ಥಿತಿ ಮುಂದುವರಿಯಲಿದೆ ಎಂದಿದ್ದಾರೆ.ಇವರ ಭವಿಷ್ಯಗಳನ್ನು ನಾನು ಸೂಕ್ಷ್ಮವಾಗಿ ಹಿಂದಿನಿಂದಲೂ ಅವಲೋಕಿಸುತ್ತಿದ್ದೇನೆ. ಈ ಹಿಂದೆ ಅವರು ಹೇಳಿದ ಅನೇಕ ಭವಿಷ್ಯಗಳು ಸುಳ್ಳಾಗಿವೆ. ಬಿ.ಎಸ್. ಯಡಿಯೂರಪ್ಪ ಅವರು ಒಂದು ವರ್ಷ ಕೂಡ ಮುಖ್ಯಮಂತ್ರಿಯಾಗಿ ಉಳಿಯುವುದಿಲ್ಲ ಎಂದಿದ್ದರು. ಆದರೆ

ಅವರು ಮೂರು ವರ್ಷಗಳ ಕಾಲ ಮುಂದುವರಿದರು.  ಜಗದೀಶ ಶೆಟ್ಟರ ಅವರು ಅವಧಿ ಮುಗಿಸುವುದಿಲ್ಲ ಎಂದು ಭವಿಷ್ಯ ಹೇಳಿದ್ದರು. ಆದರೆ ಅವರು ಅವಧಿ ಪೂರ್ಣಗೊಳಿಸಿದರು. ಇಂತಹ ಭವಿಷ್ಯವನ್ನು ಇವರು ಯಾಕೆ ಹೇಳುತ್ತಾರೋ ಅರ್ಥ ವಾಗುವುದಿಲ್ಲ. ಭವಿಷ್ಯ ಹೇಳುವುದು ಇವರಿಗೆ ಒಂದು ಚಟ ಆದಂತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry