ಶನಿವಾರ, ಜೂನ್ 12, 2021
23 °C

ಭವ್ಯ ಭವಿಷ್ಯಕ್ಕೆ ವಿದ್ಯಾಭ್ಯಾಸವೇ ಬುನಾದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಲು: ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾಭ್ಯಾಸ ಅಗತ್ಯ ತಳಪಾಯ ಒದಗಿಸಿಕೊಡುತ್ತದೆ ಎಂದು ಶಾಸಕ ಅಮರೇಶ್ ಅಭಿಪ್ರಾಯಪಟ್ಟರು.ಪಟ್ಟಣದಲ್ಲಿ ಸೋಮವಾರ ನಡೆದ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಯ ನಡೆ, ನುಡಿ, ಭಾಷೆ, ಬರಹ ಭವಿಷ್ಯ ರೂಪಿಸುವಲ್ಲಿ ಅತಿಮುಖ್ಯ ಪಾತ್ರ ವಹಿಸುತ್ತವೆ.ಡಿವೈಎಸ್‌ಪಿ ವಿ.ಗೋವಿಂದಯ್ಯ ಮಾತನಾಡಿ, ಗ್ರಾಮೀಣ ಹಿನ್ನೆಲೆಯ ವ್ಯಕ್ತಿಗಳು ಮೇಧಾಶಕ್ತಿಯಿಂದ ಮಾತ್ರ ಉನ್ನತ ಸ್ಥಾನ ಪಡೆಯಲು ಸಾಧ್ಯ. ಭವ್ಯ ಕನಸು ಕಂಡು ಅದನ್ನು ಸಾಕಾರಗೊಳಿಸಲು ಪ್ರಾಮಾಣಿಕ ಪ್ರಯತ್ನ ಪಡಬೇಕು ಎಂದು ಕಿವಿಮಾತು ಹೇಳಿದರು.ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಬಿಎಸ್‌ಸಿ ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ಉಷಾ, ಝಾನ್ಸಿ ಮತ್ತು ತಿಲಕ್ ಅವರಿಗೆ ಶಾಸಕರು ಬಹುಮಾನ ನೀಡಿದರು.ಪ್ರಾಚಾರ್ಯ ಎಂ.ರಾಮಸ್ವಾಮಿ, ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಆರ್.ವೆಂಕಟೇಶಪ್ಪ, ಕೆಡಿಆರ್‌ಎಸ್ ರಾಜ್ಯಾಧ್ಯಕ್ಷ ಕಾರ್ಗಿಲ್ ವೆಂಕಟೇಶ್, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ವೆಂಕಟೇಶಗೌಡ, ಉಪನ್ಯಾಸಕ ಪುರಷೋತ್ತಮ್, ಉಮೇಶ್, ಎಚ್.ಎಸ್.ಮಧುಸೂದನ್, ಆಲಂಗೂರು ಮಂಜುನಾಥ್, ರಾಂಪ್ರಸಾದ್, ಕೆ.ಎನ್.ಶ್ರೀನಿವಾಸ್, ಮಹ್ಮದ್ ಇಲಿಯಾಜ್, ಡಿ.ಆರ್.ದೇವರಾಜ್, ಶಂಕರನಾರಾಯಣರಾವ್ ಮತ್ತಿತರರು ಉಪಸ್ಥಿತರಿದ್ದರು.52 ಅಭ್ಯರ್ಥಿಗಳ ಆಯ್ಕೆಕೋಲಾರ: ನಗರದ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ಶನಿವಾರ ನಡೆದ ಉದ್ಯೋಗ ಸಂದರ್ಶನದಲ್ಲಿ 52 ಮಂದಿ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ ಎಂದು ಉದ್ಯೋಗಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.ಆಯ್ಕೆಯಾದ ಅಭ್ಯರ್ಥಿಗಳು ಮಾಲೂರಿನಲ್ಲಿ ಕಾರ್ಯ ನಿರ್ವಹಿಸಬೇಕು. ಸಂಸ್ಥೆಯೇ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.