`ಭವ್ಯ ಭಾರತ ನಿರ್ಮಾಣ ಮಕ್ಕಳಿಂದಾಗಲಿ'

7

`ಭವ್ಯ ಭಾರತ ನಿರ್ಮಾಣ ಮಕ್ಕಳಿಂದಾಗಲಿ'

Published:
Updated:

ಧಾರವಾಡ: `ಮಕ್ಕಳಲ್ಲಿ ವಿಚಾರ ಮಾಡುವ ಶಕ್ತಿ ಇರುತ್ತದೆ ಅವುಗಳಿಗೆ ಸ್ಫೂರ್ತಿ ನೀಡಿ ಅವರನ್ನು ಪ್ರೋತ್ಸಾಹಿ ಸುವ ಗುಣವನ್ನು ಪಾಲಕರು ಬೆಳೆಸಿ ಕೊಳ್ಳಬೇಕು' ಎಂದು ವಿಜಾಪುರ ಮಹಿಳಾ ವಿ.ವಿ. ಕುಲಪತಿ ಡಾ.ಮೀನಾ ಚಂದಾವರಕರ ಹೇಳಿದರು.ಮಕ್ಕಳ ಅಕಾಡೆಮಿಯ 12ನೇ ವಾರ್ಷಿಕೋತ್ಸವ ಹಾಗೂ ವಿಠ್ಠಲ್ ಕ್ಲಿನಿಕ್ ಮತ್ತು ನರ್ಸಿಂಗ್ ಹೋಮ್‌ನ 32ನೇ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಆರೋಗ್ಯವಂತ ಮಕ್ಕಳ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತ ನಾಡಿದ ಅವರು, `ಚಿಕ್ಕ ವಯಸ್ಸಿ ನಲ್ಲಿಯೇ ಮಕ್ಕಳಿಗೆ ಒಳ್ಳೆಯ ವಿಚಾರಗ ಳನ್ನು ಹಾಗೂ ಮಾನವೀಯ ಮೌಲ್ಯಗ ಳನ್ನು ಬಿತ್ತುವುದರಿಂದ ಅವರು ಶ್ರೇಷ್ಠ ವ್ಯಕ್ತಿಗಳಾಗಿ ಬೆಳೆಯುತ್ತಾರೆ.

ಬೆಳೆ ಯುವ ಹಂತದಲ್ಲಿಯೇ ಅವರಿಗೆ ಸೃಜನಶೀಲ ಗುಣಗಳನ್ನು ಬೆಳೆಸಿದರೆ ಭವ್ಯ ಭಾರತದ ನಿರ್ಮಾಣವಾಗಲು ಸಾಧ್ಯ. ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ 2020ಕ್ಕೆ ಭಾರತ ದೇಶ ಮುಂದುವರಿದ ದೇಶವಾಗಲಿದೆ ಎಂದು ಹೇಳಿದ್ದಾರೆ. ಆ ಕಾರ್ಯ ಮಕ್ಕಳಿಂದ ಆಗಬೇಕು. ಈ ಪ್ರಕ್ರಿಯೆ ಯಲ್ಲಿ ಮಕ್ಕಳ ಪಾತ್ರ ಮಹತ್ವದ್ದಾಗಿದೆ.

ಮಕ್ಕಳನ್ನು ಆದರ್ಶಪ್ರಾಯವಾಗಿ ಬೆಳೆಸುವ ಉದ್ದೇಶದಿಂದ ಮುಂದಿನ ವರ್ಷ ಮಹಿಳಾ ವಿಶ್ವವಿದ್ಯಾಲಯದಲ್ಲಿ ಆದರ್ಶ ಮಹಿಳೆಯರ ಕೇಂದ್ರವನ್ನು ಪ್ರಾರಂಭ ಮಾಡಲಾಗುವುದು ಈ ಕುರಿತು ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸ ಲಾಗಿದೆ' ಎಂದು ಅವರು ಹೇಳಿದರು.ಮಕ್ಕಳ ಅಕಾಡೆಮಿ ಅಧ್ಯಕ್ಷ ಡಾ.ರಾಜನ್ ದೇಶಪಾಂಡೆ, ಸಾಹಿತಿ ಶ್ರೀನಿವಾಸ ವಾಡಪ್ಪಿ, ಡಾ.ಅನುಪಮಾ ಪಾಂಡುರಂಗಿ, ಡಾ.ವೆಂಕಮ್ಮ ಗಾಂವ ಕರ, ಪ್ರೊ.ಐ.ಎಸ್.ಮಳೇಕರ, ಡಾ.ಎ. ಬಿ.ದಿಲ್‌ಶಾದ, ಪ್ರೊ.ಎಂ.ವೈ.ಸಾವಂತ, ಡಾ.ಕವನ್ ದೇಶಪಾಂಡೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry