ಭಾಂಬ್ರಿಗೆ ಗುಲ್ಬರ್ಗ ಪ್ರೇರಣೆ

7

ಭಾಂಬ್ರಿಗೆ ಗುಲ್ಬರ್ಗ ಪ್ರೇರಣೆ

Published:
Updated:

ಗುಲ್ಬರ್ಗ: ಮಹಿಳಾ ಐಟಿಎಫ್ ಫ್ಯೂಚರ್ಸ್ ಟನಿಸ್ ಟೂರ್ನಿಯ `ಗುಲ್ಬರ್ಗ ಓಪನ್ ಪ್ರಶಸ್ತಿ~ ಜಯಿಸಿದ ದೆಹಲಿಯ ಪ್ರೇರಣಾ ಭಾಂಬ್ರಿ ಡಬ್ಲ್ಯೂಟಿಎ ರ‌್ಯಾಂಕಿಂಗ್‌ನಲ್ಲಿ 4 ಸ್ಥಾನ ಮೇಲೇರಿದ್ದಾರೆ.ಗುಲ್ಬರ್ಗ ಟೂರ್ನಿ ಆರಂಭದಲ್ಲಿ 802ನೇ ರ‌್ಯಾಂಕ್‌ನಲ್ಲಿದ್ದ ಅವರು ಪ್ರಶಸ್ತಿ ಜಯಿಸಿ 12 ಅಂಕ ಸಂಪಾದಿಸಿದ್ದರು. ಟೂರ್ನಿಗೆ ಮೊದಲು ಅವರು 803 ರ‌್ಯಾಂಕ್‌ನಲ್ಲಿದ್ದರು. ಸೋಮವಾರ ಬಿಡುಗಡೆಯಾದ ರ‌್ಯಾಂಕಿಂಗ್ ಪಟ್ಟಿಯಲ್ಲಿ 798ನೇ ಸ್ಥಾನಕ್ಕೆ ಏರಿದ್ದಾರೆ. ಭಾರತದ ಆಟಗಾರ್ತಿಯರ ಪೈಕಿ ಪ್ರೇರಣಾ ಪ್ರಸ್ತುತ 7ನೇ ಶ್ರೇಯಾಂಕ ಹೊಂದಿದ್ದಾರೆ.ಇದೇ ಅವಧಿಯಲ್ಲಿ ಟೋಕಿಯೊ ಟೂರ್ನಿಯಲ್ಲಿ ಆಡಿದ್ದ ಭಾರತದ ಅಗ್ರ ಶ್ರೇಯಾಂಕಿತೆ ಸಾನಿಯಾ ಮಿರ್ಜಾ ಡಬ್ಲ್ಯೂಟಿಎ ಪಟ್ಟಿಯಲ್ಲಿ 287ರಿಂದ 289ಕ್ಕೆ ಮತ್ತು ಗುಲ್ಬರ್ಗದಲ್ಲಿ ರುಷ್ಮಿ ವಿರುದ್ಧ ನಿರಾಸೆ ಅನುಭವಿಸಿದ್ದ ನಂ.2 ಕೈರಾ ಶ್ರೋಪ್ 536ರಿಂದ 540 ಹಾಗೂ ನಂ.3 ಆಟಗಾರ್ತಿ ರಿಷಿಕಾ ಸುಂಕಾರ 631ರಿಂದ 634 ರ‌್ಯಾಂಕ್‌ಗೆ ಕುಸಿದಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry