ಗುರುವಾರ , ಮೇ 28, 2020
27 °C

ಭಾಗ್ಯಲಕ್ಷ್ಮೀ ಯೋಜನೆ ಲಾಭ ಪಡೆಯಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: ಸರ್ಕಾರ ಬಡ ಕುಟುಂಬದ ಹೆಣ್ಣುಮಕ್ಕಳಿಗೆ ನೀಡುತ್ತಿರುವ ಭಾಗ್ಯಲಕ್ಷ್ಮೀ ಯೋಜನೆಯ ಸೌಲಭ್ಯಗಳನ್ನು ಫಲಾನುಭವಿಗಳು ಲಾಭ ಪಡೆಯಬೇಕು ಎಂದು ಖಜೂರಿ ಜಿಲ್ಲಾ ಪಂಚಾಯಿತಿ ನೂತನ ಸದಸ್ಯೆ  ಜಯಶ್ರೀ ಅಶೋಕ ಸಾವಳೇಶ್ವರ ಇಂದು ಕರೆ ನೀಡಿದರು.ತಾಲ್ಲೂಕಿನ ಖಜೂರಿ ಕೋರಣೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ಭಾಗ್ಯಲಕ್ಷ್ಮೀ ಯೋಜನೆಯ ಸೀರೆ ವಿತರಣಾ ಸಮಾರಂಭದಲ್ಲಿ ಫಲಾನುಭವಿಗಳಿಗೆ ಸೀರೆ ವಿತರಿಸಿ ಅವರು ಮಾತನಾಡಿದರು.ಸರ್ಕಾರದಿಂದ ಬರುವ ಸೌಲಭ್ಯ ದೊರೆಯುವಲ್ಲಿ ಯಾವುದೇ ತೊಂದರೆ ಉಂಟಾದರೆ ಸಾರ್ವಜನಿಕರು ಸಂಪರ್ಕಿಸಿ ಗಮನಕ್ಕೆ ತಂದರೆ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಲಾಗುವುದು. ಸೌಲಭ್ಯಗಳು ಪಡೆದುಕೊಂಡಂತೆ ಶಿಕ್ಷಣದಲ್ಲಿ ಮಹಿಳೆಯರು ಗುರಿಮಿರಿ ಸಾಧನೆ ಕೈಗೊಳ್ಳಬೇಕು ಎಂದು ಹೇಳಿದರು.ತಾ.ಪಂ. ಸದಸ್ಯೆ ಪ್ರಭಾವತಿ ಎಸ್. ಢಗೆ, ಸುಮಿತ್ರಾ ಎಸ್. ವಾರಿಕ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರ್ಚನಾ ಎಸ್. ಢಗೆ ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ ನೌಕರ ಸಂಘದ ಅಧ್ಯಕ್ಷ ಪುಷ್ಪಾವತಿ ಅಶೋಕ ಚಟ್ಟಿ ಮಾತನಾಡಿದರು.ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮೀ ಜೋಶಿ ನಿರೂಪಿಸಿದರು. ಕಸ್ತುಬಾಯಿ ಮುನ್ನಹಳ್ಳಿ ಸೀರೆ ವಿತರಿಸಿದರು. ಮೊತೆಮ್ಮ, ಕರಬಸಪ್ಪ ಸಿದ್ಧಮ್ಮ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.