ಭಾಗ್ಯ ರಂಗಪ್ರವೇಶ

7

ಭಾಗ್ಯ ರಂಗಪ್ರವೇಶ

Published:
Updated:
ಭಾಗ್ಯ ರಂಗಪ್ರವೇಶ

ತಮ್ಮ ಮೂರನೇ ವಯಸ್ಸಿಗೇ ಭರತನಾಟ್ಯ ಅಭ್ಯಾಸದಲ್ಲಿ ತೊಡಗಿಕೊಂಡ ಭಾಗ್ಯ ಭರತನಾಟ್ಯ ರಂಗಪ್ರವೇಶ ಮೇ 30ರ ಬುಧವಾರವಂದು ನಡೆಯಲಿದೆ.

ಮಹದೇವಪ್ಪ ಮತ್ತು ನಾಗರತ್ನ ಅವರ ಮಗಳಾದ ಭಾಗ್ಯ ವೀರರಾಜು, ಲೀಲಾ ಉಪಾಧ್ಯಾಯ ಮತ್ತು ಮಮತಾ ಕಾರಂತ್ ಅವರ ಬಳಿ ಶಿಷ್ಯೆಯಾಗಿ ಭರತನಾಟ್ಯ ಅಭ್ಯಾಸದಲ್ಲಿ ತೊಡಗಿದರು.ಹಂಪಿ ಉತ್ಸವವನ್ನೊಳಗೊಂಡಂತೆ ಹಲವು ಕಡೆ ಭರತನಾಟ್ಯ ಪ್ರದರ್ಶನಗಳನ್ನೂ ನೀಡಿದ್ದಾರೆ. ಜತೆಗೆ ಸಂಗೀತ, ಏಕಪಾತ್ರಾಭಿನಯದಲ್ಲೂ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಬೆಂಗಳೂರಿನ ಎಚ್‌ಎಎಲ್  ಜ್ಞಾನಜ್ಯೋತಿ ಶಾಲೆಯಲ್ಲಿ ನೃತ್ಯ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಭಾಗ್ಯ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬುಧವಾರ ಸಂಜೆ 6ಕ್ಕೆ ಜೆ. ಸಿ. ರಸ್ತೆ ಕನ್ನಡ ಭವನದಲ್ಲಿ ಹಮ್ಮಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry