ಭಾಗ್ ಮಿಲ್ಖಾ ಭಾಗ್

7

ಭಾಗ್ ಮಿಲ್ಖಾ ಭಾಗ್

Published:
Updated:

ಭಾಗ್ ಮಿಲ್ಖಾ ಭಾಗ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಫರ‌್ಹಾನ್ ಅಖ್ತರ್‌ಗೆ ಒಳಗೆಲ್ಲೊ ಒಂದೆಡೆ ಖಾಲಿಯಾದ ಅನುಭವ ಕಾಡುತ್ತಿದೆಯಂತೆ!`ಚಿತ್ರೀಕರಣದ ತಂಡದೊಂದಿಗೆ ಇದ್ದಷ್ಟು ದಿನಗಳನ್ನು ಆನಂದದಿಂದ ಕಳೆದಿದ್ದೆ. ಇದೀಗ ವಿದಾಯ ಹೇಳಲು ಕಷ್ಟವಾಗುತ್ತಿದೆ. ಮಿಲ್ಖಾ ಸಿಂಗ್ ಅವರ ಅಭಿಮಾನಿಯಾಗಿದ್ದವರಿಗೆಲ್ಲ, ಅವರ ಆರಾಧ್ಯ ದೈವದ ಜೀವನ ಖಂಡಿತವಾಗಿಯೂ ಪ್ರೇರಣೆ ನೀಡಲಿದೆ' ಎಂದೆಲ್ಲ ಹೇಳಿರುವ ಫರ‌್ಹಾನ್‌ಗೆ ಮಿಲ್ಖಾ ಸಿಂಗ್ ಪಾತ್ರಕ್ಕಾಗಿ ಬಹಳಷ್ಟು ಕಷ್ಟಪಡಬೇಕಾಯಿತು ಎಂದೂ ಹೇಳಿದ್ದಾರೆ.`ಪ್ರತಿದಿನ ನಾಲ್ಕಾರು ಗಂಟೆಗಿಂತ ಹೆಚ್ಚು ವರ್ಕೌಟ್ ಮಾಡಬೇಕಾಗುತ್ತಿತ್ತು. ಅವರ ಶೈಲಿ ಅನುಕರಿಸಲು ಸಾಕಷ್ಟು ಬೆವರಿಳಿಸಬೇಕಾಯಿತು. ನಡಿಗೆ, ಓಟ, ದೃಷ್ಟಿ ಎಲ್ಲವನ್ನೂ... ಅವರಂತೆಯೇ ಮಾಡಲು ಸಾಕಷ್ಟು ಕಸುವು ಬೇಕಿತ್ತು. ಮಿಲ್ಖಾ ಸಿಂಗ್ ಅವರಿಗೆ `ಹಾರುವ ಸಿಖ್' ಖ್ಯಾತಿ ಹಾಗೆಯೇ ಬಂದಿಲ್ಲ ಎನ್ನುವುದಂತೂ ಅರ್ಥವಾಯಿತು' ಎಂದಿದ್ದಾರೆ.ಮಿಲ್ಖಾ ಸಿಂಗ್ ಚಿತ್ರವನ್ನು ನೋಡಲು ಈಗಾಗಲೇ ಶಾರುಖ್ ಖಾನ್ ಸಹ ಕಾತರದಿಂದ ಕಾಯುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ. ಅವರ ಸಾಲಿಗೆ ಕುನಾಲ್ ಸಹ ಸೇರ್ಪಡೆಗೊಂಡಿದ್ದಾರೆ. ಮಿಲ್ಖಾ ಸಿಂಗ್ ಅವರ ಪರಮ ಅಭಿಮಾನಿಯಾಗಿರುವ ನಾನು ಈ ಚಿತ್ರದ ಬಿಡುಗಡೆಗಾಗಿ ಚಡಪಡಿಸುತ್ತಿರುವೆ ಎಂದು ಶಾರುಖ್ ಹೇಳಿಕೊಂಡಿದ್ದಾರೆ. ಈ ಚಿತ್ರ 2013ರ ಜುಲೈನಲ್ಲಿ ಬಿಡುಗಡೆಯಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry