ಭಾನುವಾರವೂ ಪ್ರಶ್ನಿಸಿದ ಸಿಬಿಐ ದಿನವಿಡೀ ಶಾಸಕರ ವಿಚಾರಣೆ

7

ಭಾನುವಾರವೂ ಪ್ರಶ್ನಿಸಿದ ಸಿಬಿಐ ದಿನವಿಡೀ ಶಾಸಕರ ವಿಚಾರಣೆ

Published:
Updated:

ಬೆಂಗಳೂರು: ಬೇಲೆಕೇರಿ ಬಂದರಿನ ಮೂಲಕ ಅದಿರು ಕಳ್ಳಸಾಗಣೆ ನಡೆಸಿದ ಆರೋಪದಲ್ಲಿ ಬಂಧಿತರಾ ಗಿರುವ ಶಾಸಕರಾದ ಟಿ.ಎಚ್‌. ಸುರೇಶ್‌ಬಾಬು ಮತ್ತು ಸತೀಶ್‌ ಸೈಲ್‌ ಅವರನ್ನು ಸಿಬಿಐ ಅಧಿಕಾರಿ ಗಳು ಭಾನುವಾರವೂ ಇಡೀ ದಿನ ವಿಚಾರಣೆ ನಡೆಸಿದ್ದಾರೆ.ಇಬ್ಬರನ್ನೂ ಇಲ್ಲಿನ ಗಂಗಾನಗರ ದಲ್ಲಿರುವ ಸಿಬಿಐ ಕಚೇರಿಯಲ್ಲಿ ಇರಿಸಲಾಗಿದೆ. ಸಿಬಿಐ ಡಿಐಜಿ ಆರ್‌.ಹಿತೇಂದ್ರ, ಎಸ್‌ಪಿ ಡಾ.ಸುಬ್ರ ಹ್ಮಣ್ಯೇಶ್ವರ ರಾವ್‌ ಸೇರಿದಂತೆ ಹಲವು ಅಧಿಕಾರಿಗಳು ಶಾಸಕರ ವಿಚಾರಣೆ ಗಾಗಿ ಭಾನುವಾರವೂ ಕಚೇರಿಯಲ್ಲಿ ದ್ದರು. ಡಿಐಜಿ ಮಾರ್ಗದರ್ಶನದಲ್ಲಿ ಎಸ್‌ಪಿ ಸೇರಿದಂತೆ ಹಲವು ಪೊಲೀಸ್‌ ಅಧಿಕಾರಿಗಳು ಸುರೇಶ್‌ ಬಾಬು ಮತ್ತು ಸತೀಶ್‌ ಸೈಲ್‌ ಅವರನ್ನು ನಿರಂತರವಾಗಿ ಪ್ರಶ್ನಿಸಿದ್ದಾರೆ.ಬಳ್ಳಾರಿಯ ವಿವಿಧೆಡೆ ಪರವಾನಗಿ ಇಲ್ಲದೇ ಅದಿರನ್ನು ಬೇಲೆಕೇರಿ ಬಂದರಿಗೆ ಸಾಗಿಸಿರುವುದು, ನಂತರ ದಲ್ಲಿ ವಿದೇಶಗಳಿಗೆ ಕಳ್ಳ ಸಾಗಣೆ ಮಾಡಿ ರುವ ಆರೋಪದ ಬಗ್ಗೆ ಅವರ ವಿವರ ಣೆ ಕೇಳಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ  ಬಂಧಿತ ರಾಗಿರುವ ಕೋವೂರು ಸೋಮ ಶೇಖರ, ಕೆ.ಎರ್ರಿ ಸ್ವಾಮಿ, ಶ್ಯಾಮ್‌ ಸಿಂಗ್‌ ಮತ್ತಿತರರು ನೀಡಿರುವ ಹೇಳಿಕೆಗಳ ಬಗ್ಗೆಯೂ ಶಾಸಕರಿಂದ ಪ್ರತಿಕ್ರಿಯೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.ಬೇಲೆಕೇರಿ ಬಂದರಿನಲ್ಲೇ ಶಿಪ್ಪಿಂಗ್‌ ಕಂಪೆನಿಯನ್ನು ಹೊಂದಿದ್ದ ಸೈಲ್‌, ಅಲ್ಲಿ ನಡೆಸುತ್ತಿದ್ದ ಚಟುವಟಿಕೆಗಳ ಬಗ್ಗೆಯೂ ಬಂದರು ಅಧಿಕಾರಿಗಳಿಂದ ವಿವರಣೆ ಪಡೆಯುವ ಸಂಭವವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry