ಗುರುವಾರ , ಅಕ್ಟೋಬರ್ 24, 2019
21 °C

ಭಾನುವಾರ ಮತ್ತೆ ಕಂಪಿಸಿದ ಜಪಾನ್

Published:
Updated:

ಟೋಕಿಯೊ(ಪಿಟಿಐ): ಪೂರ್ವ ಮತ್ತು ಈಶಾನ್ಯ ದಿಕ್ಕಿನ ಜಪಾನಿನಲ್ಲಿ ಭಾನುವಾರ ಬೆಳಗ್ಗೆ 10.58ಕ್ಕೆ ಮತ್ತೆ ಭೂಕಂಪ ಸಂಭವಿಸಿದೆ. ಭಾನುವಾರದ ಭೂಕಂಪನದ ಪ್ರಮಾಣ ರಿಕ್ಷರ್ ಮಾಪಕದಲ್ಲಿ 7.0ರಷ್ಟಿದ್ದುದು ದಾಖಲಾಗಿದೆ. 

ಕಳೆದ ವರ್ಷದ ಭಾರಿ ಪ್ರಮಾಣದ ಭುಕಂಪದಿಂದ ನಲುಗಿ ಈಗ ಚೇತರಿಸಿಕೊಳ್ಳುತ್ತಿರುವ ಜಪಾನಿನಲ್ಲಿ ಭಾನುವಾರ ಮತ್ತೆ ಭೂಮಿ ನಡುಗಿದೆ. ಟೋಕಿಯೊದಲ್ಲಿ ಕಟ್ಟಡಗಳು ಓಲಾಡಿದ ಅನುಭವವಾಗಿದೆ. ಆದರೆ ಇದುವರೆಗೆ ಯಾವುದೇ ಸಾವುನೋವಿನ ಕುರಿತು ವರದಿಯಾಗಿಲ್ಲ. ಸುನಾಮಿ ಎಚ್ಚರಿಕೆಯನ್ನೂ ಘೋಷಿಸಿಲ್ಲ.

ಭಾನುವಾರದ ಭೂಕಂಪದಿಂದ ಅಣು ಸ್ಥಾವರಗಳಲ್ಲಿ ಏರುಪೇರಾದ ಬಗ್ಗೆ ಯಾವ ವರದಿಗಳೂ ಬಂದಿಲ್ಲವೆಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಟೋಕಿಯೊದಿಂದ ದಕ್ಷಿಣಕ್ಕೆ 560 ಕಿ.ಮೀ ದೂರದಲ್ಲಿ ಈಶಾನ್ಯ ದಿಕ್ಕಿನ ತೋರಿಶಿಮಾದ ಹತ್ತಿರ ಭೂಕಂಪದ ಕೇಂದ್ರ ಬಿಂದುವಿತ್ತೆಂದು ಜಪಾನಿನ ಹವಾಮಾನ ಇಲಾಖೆ ತಿಳಿಸಿದೆ. ಈ ಭೂಕಂಪನದಿಂದ ಟೋಕಿಯೊದಲ್ಲಿ ಕಟ್ಟಡಗಳು ಓಲಾಡಿವೆ.

ಕಳೆದ ವರ್ಷ ಸಂಭವಿಸಿದ ಭಾರಿ ಭೂಕಂಪದಿಂದ ಜಪಾನ್ ದೇಶದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿತ್ತು. ಆಗ ಸಾವಿರಾರು ಜನರು ಕಾಣೆಯಾಗಿದ್ದರು. ಭೂಕಂಪದ ಪರಿಣಾಮವಾಗಿ ಸಮುದ್ರದಲ್ಲಿ ಉಂಟಾದ ಸುನಾಮಿ ದೈತ್ಯ ಅಲೆಗಳಿಂದ ಜಪಾನಿನ  ಕೆಲವು ಅಣು ವಿದ್ಯುತ್ ಸ್ಥಾವರಗಳಿಗೆ ಹಾನಿಯಾಗಿತ್ತು. ಅವು ಕೆಲವು ದಿನಗಳ ಕಾಲ ಕಾರ್ಯನಿರ್ವಹಿಸಿರಲಿಲ್ಲ.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)