ಭಾನುವಾರ, 12-6-1961

ಗುರುವಾರ , ಜೂಲೈ 18, 2019
24 °C

ಭಾನುವಾರ, 12-6-1961

Published:
Updated:

ಹಿಂದುಳಿದ ವರ್ಗೀಕರಣಕ್ಕೆ ಆರ್ಥಿಕ ಸ್ಥಿತಿ ಆಧಾರಬೆಂಗಳೂರು, ಜೂನ್ 11
- ಹಿಂದುಳಿದ ಪಂಗಡಗಳ ವರ್ಗೀಕರಣಕ್ಕೆ ಆರ್ಥಿಕ ಸ್ಥಿತಿ ಆಧಾರವಾಗಿರಬೇಕೆಂದು ಎಂ.ಪಿ.ಸಿ.ಸಿ. ಅಧ್ಯಕ್ಷ ಶ್ರೀಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ತಿಳಿಸಿದರು.ಬೆಳಿಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಗನಗೌಡ ಸಮಿತಿಯ ವರದಿಯನ್ನು ಪ್ರಸ್ತಾಪಿಸಿದ ಎಂ.ಪಿ.ಸಿ.ಸಿ. ಅಧ್ಯಕ್ಷರು ಹಿಂದುಳಿದ ಪಂಗಡಗಳ ವರ್ಗೀಕರಣ ಸಂಬಂಧದಲ್ಲಿ ಶಾಸ್ತ್ರೀಯವಾದ ಹಾಗೂ ನ್ಯಾಯ ಸಮ್ಮತವಾದ ಅಭಿಪ್ರಾಯತಾಳಬೇಕಾದ ಕಾಲ ಬಂದಿದೆಯೆಂದು ಹೇಳಿ ವಿದ್ಯಾಭ್ಯಾಸದಲ್ಲಿ ಹಿಂದುಳಿದಿರುವ ಗ್ರಾಮಾಂತರ ಪ್ರದೇಶದ ಜನರಿಗೆ ವಿದ್ಯಾ ಸಂಸ್ಥೆಗಳಲ್ಲಿ ಹಾಗೂ ಸರ್ಕಾರಿ ನೌಕರಿಯಲ್ಲಿ ಹೆಚ್ಚಿನ ಆದ್ಯತೆ ದೊರೆಯಬೇಕೆಂದರು.ಅಹಮದಾಬಾದ್ ಬಳಿ ಹೊಸ ತೈಲ ಗಣಿ ಪತ್ತೆಡೆಹ್ರಾಡೂನ್, ಜೂನ್ 11 - ಅಹಮದಾಬಾದಿಗೆ ಹದಿನೇಳು ಮೈಲಿಗಳ ದೂರದಲ್ಲಿರುವ ಪ್ರದೇಶವೊಂದರಲ್ಲಿ ಹೊಸ ಎಣ್ಣೆ ಗಣಿಗಳು ಪತ್ತೆಯಾಗಿವೆಯೆಂದು ಕೇಂದ್ರ ತೈಲ ಮತ್ತು ಖನಿಜ ಶಾಖೆಯ ಸಚಿವ ಶ್ರೀ ಕೆ. ಡಿ. ಮಾಳವೀಯರವರು ಇಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.60-61ರಲ್ಲಿ ಶೇ. 250ರಷ್ಟು ಹೆಚ್ಚು ಗುರಿ ಸಾಧನೆ
ಬೆಂಗಳೂರು, ಜೂನ್ 11 - 1960-61 ರಲ್ಲಿ 1002 ಯಂತ್ರಗಳನ್ನು ತಯಾರಿಸಿ ದ್ವಿತೀಯ ಯೋಜನೆಯ ಗುರಿಗಿಂತ ಶೇ. 250 ರಷ್ಟು ಹೆಚ್ಚು ಸಾಧಿಸಿರುವ ಹಿಂದೂಸ್ಥಾನ್ ಮೆಷಿನ್ ಟೂಲ್ಸ್ ಕಾರ್ಖಾನೆ ಈ ಸಾರಿ ಪ್ರಥಮ ಬಾರಿಗೆ ಶೇ. 10 ರಷ್ಟು ಡಿವಿಡೆಂಡನ್ನು ನೀಡಿದೆ.ವೃದ್ಧ ತರುಣಿ !

ನ್ಯೂಯಾರ್ಕ್, ಜೂನ್ 11 - ಅಮೆರಿಕದಲ್ಲಿ ಪ್ರಥಮ ಮಹಿಳಾ ಮೇಯರ್ ಆಗಿ ಆಯ್ಕೆಯಾಗಲಿರುವ ಶ್ರೀಮತಿ ಸುಸನ್ ಸಾಲ್ವರ್ ಅವರು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ತಮ್ಮ ಚಿತ್ರಗಳು ತಮ್ಮನ್ನು ತುಂಬಾ ವಯಸ್ಸಾದವಳಂತೆ ಕಾಣುವ ಹಾಗೆ ಮಾಡಿದೆಯೆಂದು ದೂರಿದ್ದಾರೆ. ಅವರಿಗೆ ಈಗ 101 ವರ್ಷ ವಯಸ್ಸು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry