ಭಾನುವಾರ, 19-6-1961

ಮಂಗಳವಾರ, ಜೂಲೈ 23, 2019
27 °C

ಭಾನುವಾರ, 19-6-1961

Published:
Updated:

ಇತರೆ ಪಕ್ಷಗಳೊಡನೆ ಪಿ.ಎಸ್.ಪಿ. ಚುನಾವಣೆ ಮೈತ್ರಿ ಇಲ್ಲ

ಮದ್ರಾಸ್, ಜೂನ್ 18 - ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರಜಾ ಸೋಷಲಿಸ್ಟ್ ಪಕ್ಷವು ತನ್ನ ಸಂಘಟಿತ ಸಾಮರ್ಥ್ಯದಿಂದಲೇ ಇತರ ಪಕ್ಷಗಳನ್ನು ಎದುರಿಸುವುದೆಂದು ಪಕ್ಷದ ವಕ್ತಾರರೊಬ್ಬರು ಇಂದು ಇಲ್ಲಿ ನುಡಿದರು.ತಮ್ಮ ಪಕ್ಷವು ಚುನಾವಣೆಗಳಲ್ಲಿ ಕಾಂಗ್ರೆಸ್, ಕಮ್ಯುನಿಸ್ಟ್‌ಪಕ್ಷ, ಸ್ವತಂತ್ರಪಕ್ಷ ಹಾಗೂ ಜನಸಂಘಗಳೊಂದಿಗೆ ಯಾವ ಮೈತ್ರಿಯನ್ನೂ ಹೊಂದುವುದಿಲ್ಲವೆಂದು ಅವರು ಸ್ಪಷ್ಟಪಡಿಸಿದರು.`ಗೋವಾ ಸ್ವತಂತ್ರವಾಗದಿದ್ದರೆ ಭಾರತದ ಸ್ವಾತಂತ್ರ್ಯ ಅಪೂರ್ಣ~

ಮುಂಬೈ, ಜೂನ್ 18 - ಪೋರ್ಚುಗೀಸರ ವಿರುದ್ಧ ನಡೆಸುತ್ತಿರುವ ತಮ್ಮ ಹೋರಾಟ ದಲ್ಲಿ ಗೋವಾದಲ್ಲಿನ ಭಾರತೀಯರು ತಮ್ಮ ಶಕ್ತಿಯೆಲ್ಲವನ್ನೂ ವಿನಿಯೋಗಿಸಿದಲ್ಲಿ 1961ರ ಅಂತ್ಯಕ್ಕೆ ಮುಂಚೆಯೇ ಗೋವಾವು ಸ್ವಾತಂತ್ರ್ಯವನ್ನು ಗಳಿಸಬಹುದೆಂಬುದರಲ್ಲಿ ತಮಗೆ ಸಂಶಯವೇ ಇಲ್ಲವೆಂದು ರಕ್ಷಣಾ ಸಚಿವ ಶ್ರೀ ವಿ. ಕೆ. ಕೃಷ್ಣಮೆನನರು ಇಂದು ಇಲ್ಲಿ ನುಡಿದರು.1961 ಗೋವದ ಸ್ವಾತಂತ್ರ್ಯದ ವರ್ಷ ಎಂಬ ಘೋಷಣೆಯೊಡನೆ ಗೋವದ ರಾಷ್ಟ್ರೀಯ ಪ್ರಚಾರ ಸಮಿತಿಯು ಏರ್ಪಡಿ ಸಿರುವ ಗೋವ ಸರ್ಕಾರದ ಆಚರಣೆಯ ಅಂತಿಮ ಕಾರ್ಯಕ್ರಮವಾಗಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮಾತ ನಾಡುತ್ತಾ ಶ್ರೀ ಮೆನನರು `ಗೋವನ್ನರು~ ಎಂಬ ಪ್ರತ್ಯೇಕ ಜನಾಂಗವೇ ಇಲ್ಲದ ಕಾರಣ ಗೋವನರ ಸಮಸ್ಯೆ ಎಂಬುದೇ ಇಲ್ಲವೆಂದರು.ಅಸ್ಸಾಂ ಪರಿಸ್ಥಿತಿ ಕುರಿತು ಚರ್ಚೆ

ಬೆಂಗಳೂರು, ಜೂನ್ 18 - `ಅನೇಕ ವರ್ಷಗಳಿಂದ ಬೆಳೆದು ಬಂದಿರುವ ಬಹು ಕ್ಲಿಷ್ಟವಾದ ಸಮಸ್ಯೆ~ ಎಂದು ಪಕ್ಷದ ಕಾರ್ಯದರ್ಶಿ ಶ್ರೀ ಅಜಯ್ ಘೋಷ್ ಅವರು ವರದಿ ಮಾಡಿದ್ದ ಅಸ್ಸಾಂನಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಇಂದು ನಗರದಲ್ಲಿ ಆರಂಭವಾದ ಭಾರತದ ಕಮ್ಯುನಿಸ್ಟ್ ಪಕ್ಷದ ರಾಷ್ಟ್ರೀಯ ಪಕ್ಷದ ಕೌನ್ಸಿಲ್ ಸಭೆ ಚರ್ಚಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry