ಭಾನುವಾರ, 6.2.1961

7

ಭಾನುವಾರ, 6.2.1961

Published:
Updated:ಭಾನುವಾರ, 6.2.1961

‘ನಿಮ್ನ ವರ್ಗದ ಜನತೆಯಲ್ಲಿ ಆತ್ಮನಂಬಿಕೆ ಬೆಳೆಯಬೇಕು’


ಹೈದರಾಬಾದ್, ಫೆ. 5- ನಿಮ್ನ ವರ್ಗದವರು ಮತ್ತು ಗಿರಿಜನರು ಶಕ್ತಿ ಹಾಗೂ ಆತ್ಮನಂಬಿಕೆಯ ಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಪ್ರಧಾನಮಂತ್ರಿ ನೆಹರು ಅವರು ಇಂದು ಇಲ್ಲಿ ಸಲಹೆ ನೀಡಿದರು.ನಿಮ್ನ ವರ್ಗದವರ ಮತ್ತು ಗಿರಿಜನರ ಅಖಿಲಭಾರತ ಶಾಸಕರ ಸಮ್ಮೇಳನವನ್ನು ಸಿಕಂದರಾಬಾದ್ ಪೆರೇಡ್ ಮೈದಾನದಲ್ಲಿ ಉದ್ಘಾಟಿಸಿದರು. ದೇಶದಾದ್ಯಂತ ಒಟ್ಟು 784 ಮಂದಿ ಶಾಸಕರ ಪೈಕಿ 250 ಮಂದಿ ಸದಸ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಕೇಂದ್ರದ ರೈಲ್ವೆ ಮಂತ್ರಿ ಶ್ರೀ ಜಗಜೀವನರಾಂ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ರಷ್ಯ ಉಪಗ್ರಹದಲ್ಲಿ ಮಾನವನ ಸಂಭವ

ಲಂಡನ್, ಫೆ. 5- ರಷ್ಯ ಮೊನ್ನೆ ಹಾರಿಸಿದ ಉಪಗ್ರಹದಿಂದ ಹೊರಬಿದ್ದುವೆಂದು ನಂಬಲಾಗಿರುವ ಮಾನವ ಧ್ವನಿಯೊಂದನ್ನು ತಾವು ಸಂಗ್ರಹಿಸಿರುವುದಾಗಿ ಇಬ್ಬರು ಇಟಾಲಿಯನ್ ಅಮೆಚೂರ್ ರೇಡಿಯೋ ವೈಜ್ಞಾನಿಕರು ನಿನ್ನೆ ರಾತ್ರಿ ಇಟಲಿಯ ಬ್ಯಾರಿನ್‌ನಲ್ಲಿ ಪ್ರಕಟಿಸಿದರು.

‘ಕಾಮನ್‌ವೆಲ್ತ್‌ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಸ್ಥಾನ ಸಲ್ಲದು’

ಬೆಂಗಳೂರು, ಫೆ. 5- ಮುಂದಿನ ಮಾರ್ಚಿಯಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ರಾಷ್ಟ್ರಗಳ ಪ್ರಧಾನಿಗಳ ಸಮ್ಮೇಳನ ದಕ್ಷಿಣ ಆಫ್ರಿಕ ಅನುಸರಿಸುತ್ತಿರುವ ವರ್ಣಭೇದ ನೀತಿಯನ್ನು ಚರ್ಚಿಸಿ ಆ ರಾಷ್ಟ್ರವನ್ನು ಕಾಮನ್‌ವೆಲ್ತ್ ಕೂಟದಿಂದ ಹೊರಗಿಡಬೇಕಾದುದು ಅಗತ್ಯವೆಂದು ದಕ್ಷಿಣ ಆಫ್ರಿಕಾದ ಭಾರತೀಯರ ನಾಯಕ ಶ್ರೀ ಯೂಸುಫ್ ಮಹಮದ್ ದಾದೂ ಅವರು ಇಂದು ಇಲ್ಲಿ ಒತ್ತಿ ಹೇಳಿದರು.

ಗೌರವ ಪದವಿ ಒಲ್ಲದ ಸಚಿವ ಶ್ರೀಮಾಲಿ

ನವದೆಹಲಿ, ಫೆ. 5- ನಾಗಪುರ ವಿಶ್ವವಿದ್ಯಾನಿಲಯವು ಇಂದು ನಡೆದ ಘಟಿಕೋತ್ಸವದಲ್ಲಿ ತಮಗೆ ‘ಡಾಕ್ಟರ್ ಆಫ್ ಲಾಸ್’ ಗೌರವ ಪದವಿಯನ್ನಿತ್ತು ಗೌರವಿಸಬೇಕೆಂದಿದ್ದುದನ್ನು ಕೇಂದ್ರ ವಿದ್ಯಾಸಚಿವ ಡಾ. ಕೆ.ಎಲ್. ಶ್ರೀಮಾಲಿಯವರು ನಿರಾಕರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry