ಭಾನುವಾರ, ಡಿಸೆಂಬರ್ 8, 2019
25 °C

ಭಾನುವಾರ, 8-9-1963

Published:
Updated:
ಭಾನುವಾರ, 8-9-1963

ಬೊಕಾರೊದಲ್ಲಿ 67-68ರ ಹೊತ್ತಿಗೆ ಉಕ್ಕು ಉತ್ಪನ್ನ

ನವದೆಹಲಿ, ಸೆ. 7
- ಬೊಕಾರೊದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಉಕ್ಕು ಕಾರ್ಖಾನೆಯಲ್ಲಿ 1967-68ರ ಹೊತ್ತಿಗೆ ಉತ್ಪಾದನೆ ಆರಂಭವಾಗುತ್ತದೆ. ಇದಕ್ಕೂ ಮುಂಚೆ ಬೀಡು ಕಬ್ಬಿಣದ ಉತ್ಪನ್ನವಾಗಬಹುದು.ಪ್ರಧಾನ ಮಂತ್ರಿ ನೆಹರೂ ಮತ್ತು ಉಕ್ಕು ಶಾಖೆ ಸಚಿವ ಶ್ರೀ ಸಿ. ಸುಬ್ರಹ್ಮಣ್ಯಂರವರು ಈ ಯೋಜನೆ ಬಗ್ಗೆ ನಡೆಸಿರುವ ಆಖೈರು ವಿಮರ್ಶೆಯಿಂದ ಈ ಅಂಶ ವ್ಯಕ್ತಪಟ್ಟಿದೆ.ಅಮೆರಿಕದ ಸಹಾಯ ಕೋರಿ ಸಲ್ಲಿಸಿದ ಕೇಳಿಕೆ ವಾಪಸು ಪಡೆದಿರುವ ವಿಚಾರವೂ ಸೇರಿ ಬೊಕಾರೊ ಯೋಜನೆಗೆ ಸಂಬಂಧಿಸಿದ ಪೂರ್ಣ ವಿವರಗಳನ್ನೊಳಗೊಂಡ ಹೇಳಿಕೆಯೊಂದನ್ನು, ಶ್ರೀ ಸುಬ್ರಹ್ಮಣ್ಯಂರವರು ಸೋಮವಾರ ಲೋಕಸಭೆಯಲ್ಲಿ ನೀಡುವ ನಿರೀಕ್ಷೆಯಿದೆ.

ಪ್ರತಿಕ್ರಿಯಿಸಿ (+)