ಶನಿವಾರ, ಮೇ 8, 2021
18 °C
ಏಷ್ಯನ್ ಜೂನಿಯರ್ ಕುಸ್ತಿ

ಭಾರತಕ್ಕೆ ಎರಡು ಬಂಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದ ಪ್ರದೀಪ್ ಕುಮಾರ್ ಹಾಗೂ ಸುಮಿತ್ ಅವರು ಥಾಯ್ಲೆಂಡ್‌ನಲ್ಲಿ ಭಾನುವಾರ ಕೊನೆಗೊಂಡ ಏಷ್ಯನ್ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರದ ಸಾಧನೆ ಮಾಡಿದ್ದಾರೆ.

ಅಂತಿಮ ದಿನ ಎರಡು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚು ಗೆಲ್ಲುವ ಮೂಲಕ ಭಾರತ ಟೂರ್ನಿಯಲ್ಲಿ ಒಟ್ಟು 17 ಪದಕಗಳನ್ನು ಜಯಿಸಿತು.60 ಕೆ.ಜಿ ಫ್ರೀಸ್ಟೈಲ್ ವಿಭಾಗದ ಫೈನಲ್‌ನಲ್ಲಿ ಪ್ರದೀಪ್ 8-3 ರಲ್ಲಿ ಉತ್ತರ ಕೊರಿಯಾದ ಕುಕ್ ಗ್ವಾಂಗ್ ಕಿಮ್ ವಿರುದ್ಧ ಗೆದ್ದರು. 96 ಕೆ.ಜಿ ವಿಭಾಗದಲ್ಲಿ ಸಾಮರ್ಥ್ಯ ಮೆರೆದ ಸುಮಿತ್ 7-0 ರಲ್ಲಿ ಕಜಕಸ್ತಾನದ ಯೆರ್ಮುಕಾಂಬೆಟ್ ಇಂಕಾರ್ ವಿರುದ್ಧ ಜಯಿಸಿ ಚಿನ್ನ ಬಾಚಿದರು.ವಿಕಾಸ್ (66 ಕೆ.ಜಿ ವಿಭಾಗ) ಹಾಗೂ ಪ್ರದೀಪ್ ಕುಮಾರ್ (74 ಕೆ.ಜಿ ವಿಭಾಗ) ಕ್ರಮವಾಗಿ ಅಂತಿಮ ಪೈಪೋಟಿಯಲ್ಲಿ ಸೋಲು ಅನುಭವಿಸಿ ಬೆಳ್ಳಿಗೆ ತೃಪ್ತಿಪಟ್ಟರು. 55 ಕೆ.ಜಿ ವಿಭಾಗದಲ್ಲಿ ಇರಾನಿನ ಯೂನಿಸ್ ವಿರುದ್ಧ ಸೆಣಸಿದ ಭಾರತದ ಮನದೀಪ್ ಕಂಚು ಗೆದ್ದರು.ಈ ಟೂರ್ನಿಯಲ್ಲಿ `ಎಫ್‌ಐಎಲ್‌ಎ'ನ ನೂತನ ನಿಯಮಗಳಡಿ ಸ್ಪರ್ಧಿಸಿದ್ದ ಭಾರತದ ಕುಸ್ತಿಪಟುಗಳು ಮೂರು ಚಿನ್ನ, ಐದು ಬೆಳ್ಳಿ ಹಾಗೂ ಒಂಬತ್ತು ಕಂಚುಗಳನ್ನು ಗೆದ್ದುಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.